ಬಾಗಲಕೋಟೆ ಜಿಲ್ಲೆಯಲ್ಲಿ ಏಡ್ಸ್‌ ಕಾಟ ಅತ್ಯಧಿಕ

Stop Aids
ಬಾಗಲಕೋಟೆ, ಜೂನ್ 30: ಜಿಲ್ಲೆಯಲ್ಲಿ ಮಹಾಮಾರಿ ಏಡ್ಸ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗತೊಡಗಿದೆ. 2006 ರಿಂದ ಇದುವರಗೆ ಒಟ್ಟು1761 ಜನ ಏಡ್ಸ್‌ಗೆ ಬಲಿಯಾಗಿದ್ದು, ಈ ಭಾಗದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಪ್ರಸ್ತುತ 17,917 ಜನ ಎಚ್‌ಐವಿ ಪೀಡಿತರಿದ್ದು, ಈ ಮೂಲಕ ಬಾಗಲಕೋಟೆ ರಾಜ್ಯದಲ್ಲೇ ಅತ್ಯಧಿಕ ಎಚ್‌ಐವಿ ಸೋಂಕಿತರನ್ನು ಒಳಗೊಂಡಿರುವ ಜಿಲ್ಲೆಯಾಗಿದೆ. ಅಲ್ಲದೇ ದೇಶದ ಅತ್ಯಧಿಕ ಎಚ್‌ಐವಿ ಬಾಧಿತರ ಸಾಲಿನಲ್ಲಿ ಜಿಲ್ಲೆ ಮೂರನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಎಸ್.ಎಚ್. ಅರಹುಣಸಿ ಮಾಹಿತಿ ನೀಡಿದ್ದಾರೆ.

2006ರಿಂದ ಇದುವರೆಗೆ ಬಾಗಲಕೋಟೆಯಲ್ಲಿ 1708 ಜನ, ಮುಧೋಳದಲ್ಲಿ 44 ಮತ್ತು ಜಮಖಂಡಿಯಲ್ಲಿ 9 ಜನ ಎಚ್‌ಐವಿಗೆ ಬಲಿಯಾಗಿದ್ದಾರೆ ಎಂದು ಅರಹುಣಸಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 2007ರಿಂದ ಇದುವರೆಗೆ 863 ಎಚ್‌ಐವಿ ಸೋಂಕಿತ ಗರ್ಭಿಣಿಯರಿಗೆ ಹೆರಿಗೆಯಾಗಿದ್ದು, ಅದರಲ್ಲಿ 804 ಮಂದಿ ನೆರೋಫಿನ್ ಔಷಧಿ ಪಡೆದುಕೊಂಡಿದ್ದಾರೆ.

ಮುಧೋಳ, ಮಹಾಲಿಂಗಾಪುರ ಮತ್ತು ಜಮಖಂಡಿಯ ವಿಜಾಪುರ ರಸ್ತೆ ಪ್ರದೇಶ ಮತ್ತು ಕಾಂಬಳೆ ಗಲ್ಲಿ, ಸಿದ್ದಾಪುರ, ಕಡಕೋಳ, ಕಂಕನವಾಡಿ, ಕುಂಬಾರಹಳ್ಳಿ, ಬನಹಟ್ಟಿ, ರಬಕವಿ, ಬರಗಿ, ಚಿಮ್ಮಡ, ತೇರದಾಳ ಸೇರಿದಂತೆ ಇನ್ನಿತರ ಕೆಲ ಪ್ರದೇಶಗಳಲ್ಲಿ ವೇಶ್ಯಾವಾಟಿಕೆ ವಿಪರೀತವಾಗಿದೆ. ಈ ಭಾಗದಲ್ಲೇ ಎಚ್‌ಐವಿ ಪೀಡಿತರು ಅಧಿಕ ಸಂಖ್ಯೆಯಲ್ಲಿ ಕಂಡುಬಂದಿರುವುದಾಗಿ ಆರೋಗ್ಯ ಇಲಾಖೆ ದೃಢಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+