ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

25 ಪೈಸೆ ನಂತರ ಐದು ರು ನೋಟು ಚಲಾವಣೆ ಸ್ಥಗಿತ?

By Mahesh
|
Google Oneindia Kannada News

RBI to cease Five rupee coin
ಬೆಂಗಳೂರು ಜೂ 30:ಇಂದಿನಿಂದ ದೇಶಾದ್ಯಂತ ನಾಲ್ಕಾಣೆ (25ಪೈಸೆ ನಾಣ್ಯ)ಚಲಾವಣೆ ಸ್ಥಗಿತಗೊಳ್ಳಲಿದೆ. ಇದರ ಹಿಂದೆಯೇ ಎಂಟಾಣೆ (50ಪೈಸೆ ನಾಣ್ಯ) ಚಲಾವಣೆ ಸ್ಥಗಿತಗೊಳಿಸುವ ಹಾಗೂ ಐದು ರೂಪಾಯಿಯ ನೋಟುಗಳ ಮುದ್ರಣ ನಿಲ್ಲಿಸುವ ಚಿಂತನೆಗಳು ನಡೆಯುತ್ತಿವೆ.

ತಯಾರಿಕೆಯ ವೆಚ್ಚ ಹೆಚ್ಚಾಗಿರುವುದರಿಂದಲೇ ಚಲಾವಣೆ ಕಡಿಮೆಗೊಂಡ ನಾಣ್ಯವನ್ನು ಬದಿಗೆ ಸರಿಸಲಾಗುತ್ತದೆ. ಇಂದಿನಿಂದ ನಾಲ್ಕಾಣೆಯ ನಾಣ್ಯ ಸ್ಥಗಿತಗೊಳ್ಳಲಿದೆ. ಅಲ್ಲದೆ, ಬ್ಯಾಂಕ್ ಗೆ ಕೊಟ್ಟು ಹಣ ವಿನಿಮಯ ಮಾಡಿಕೊಳ್ಳಲು ಇಂದೇ ಕೊನೆ ದಿನಾಂಕ. ನಾಳೆ ದಿನ ನಿಮ್ಮ ಮನೆ ದೇವರ ಕಾಣಿಕೆ ಡಬ್ಬಿಯಲ್ಲಿ, ಉಳಿತಾಯದ ಡಬ್ಬಿಯಲ್ಲಿ, ಹಳೆ ಶರ್ಟು ಕಿಸೆಯಲ್ಲಿ ಹಾಕಿರುವ ನಾಲ್ಕಾಣೆ ಸಿಕ್ಕರೆ ಏನೂ ಮಾಡಲು ಬರುವುದಿಲ್ಲ. ಇನ್ಮುಂದೆ ಎಂಟಾಣೆಗೂ ಸ್ಥಿತಿ ಬರಬಹುದು.

ನಾಣ್ಯಗಳ ತಯಾರಿಕೆಗೆ ಸ್ಟೈನ್‌ಲೆಸ್ ಸ್ಟೀಲ್ ಬಳಸಲಾಗುತ್ತದೆ. ನಾಣ್ಯಗಳ ತಯಾರಿಕೆಗೆ ಅದರ ಮುಖಬೆಲೆಗಿಂತ ಹೆಚ್ಚು ವೆಚ್ಚವಾಗುತ್ತದೆ. ಆದರೆ ನಾಣ್ಯ ಅಧಿಕ ಸಮಯದವರೆಗೆ ಚಲಾವಣೆಯಲ್ಲಿರುವುದರಿಂದ ಆರ್‌ಬಿಐ ನಷ್ಟವನ್ನು ಲೆಕ್ಕಿಸದೆ ನಾಣ್ಯಗಳತ್ತ ಹೆಚ್ಚು ಒಲವು ತೋರುತ್ತದೆ.

ಒಂದು ರೂ. ಹಾಗೂ ಎರಡು ರೂ. ನೋಟುಗಳ ಮುದ್ರಣ ಸ್ಥಗಿತಗೊಂಡು ದಶಕ ಸಮೀಪಿಸುತ್ತಿದೆ. ಈ ನೋಟುಗಳು ಮಾರುಕಟ್ಟೆಯಿಂದ ಕಾಣೆಯಾಗಿವೆ. ನೋಟಿಗೆ ಪರ್ಯಾಯವಾಗಿ ನಾಣ್ಯಗಳನ್ನು ಚಲಾವಣೆಗೆ ಬಿಡಬೇಕಾಗುತ್ತದೆ. ನಾಣ್ಯಗಳು ಸಾಕಷ್ಟು ಪ್ರಮಾಣದಲ್ಲಿ ಚಲಾವಣೆಯಲ್ಲಿವೆ ಎಂಬುದು ಖಾತ್ರಿಯಾಗುತ್ತಿದ್ದಂತೆಯೇ ಐದು ರೂಪಾಯಿಯ ಮುದ್ರಣ ನಿಲ್ಲಿಸಲಾಗುತ್ತದೆ.

16 ಆಣೆ ಅಥವಾ 64 ಪೈಸೆ ಬದಲು 100 ಪೈಸೆ ಇರಲಿ ಎಂದು 1955ರಲ್ಲಿ ಇಂಡಿಯನ್ ಕಾಯಿನೇಜ್ ಕಾಯಿದೆಗೆ ತಿದ್ದುಪಡಿ ತರಲಾಯಿತು. ಮೆಟ್ರಿಕ್ ಸಿಸ್ಟಮ್ ಗೆ ಬದಲಾದ ನಂತರ 2.5 ಗ್ರಾಮ್ ತೂಗುವ ನಿಕ್ಕಲ್ ಬಳಸಿರುವ 25 ಪೈಸೆ ನಾಣ್ಯಗಳು ಚಾಲ್ತಿಗೆ ಬಂದವು. 1992ರ ನಂತರ 1 ರೂ ನಾಣ್ಯ ಚಲಾವಣೆಗೆ ಬಂದಿತು. ಹೊಚ್ಚ ಹೊಸ 25 ಪೈಸೆ ನಾಣ್ಯ ಫೆರೈಟ್ ಸ್ಟೇನ್ ಲೆಸ್ ಸ್ಟೀಲ್ ನಿಂದ ಮಾಡಿದ್ದು 2.83 ಗ್ರಾಮ್ ತೂಕುತ್ತಿತ್ತು, ಈಗ ಬರೀ ನೆನಪು ಅಷ್ಟೇ.

English summary
The 25 paise coin now has become hostory from Thursday(Jun 30). After ceasing denominations below 25 paise Reserve Bank of India now ready to cease Five rupee Curreny note and 50 paise coin. RBI has received complaint from Shops. Businessmen and many public sector organization according to sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X