ರಾಯಚೂರು-ಯಾದಗಿರಿ ಗಡಿಯಲ್ಲಿ ಕನ್ನಡ ಶಾಲೆಗಳಿಗೆ ಬೀಗ

ಆದರೆ ಈ ಬಗ್ಗೆ ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ದಿವ್ಯ ನಿರ್ಲಕ್ಷ ವಹಿಸಿರುವುದು ದುರದೃಷ್ಟಕರ. ವಿಧಾನ ಪರಿಷತ್ ನಲ್ಲಿ ಪ್ರತಿಪಕ್ಷ ನಾಯಕಿಯಾಗಿರುವ ಮೋಟಮ್ಮ ಅವರಿಗೆ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ.
ಆಂಧ್ರ ಪ್ರದೇಶದ ಮೆಹಬೂಬ್ ನಗರ ಜಿಲ್ಲೆಯ ಮಾಗನೂರು ಮಂಡಲದ ಕೃಷ್ಣಾ, ಚೇಗುಂಟ, ಗುರ್ಜಾಲ ಇತ್ಯಾದಿ 13 ಗಡಿಗ್ರಾಮಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಹೈಸ್ಕೂಲ್ ಮಕ್ಕಳ ವ್ಯಾಸಂಗ ನಿರರ್ಥಕವಾಗುತ್ತಿದೆ. ಅವರಿಗೆ ಸೂಕ್ತ ಮಾರ್ಗದರ್ಶನ ಇಲ್ಲವಾಗಿದೆ.
ಎಸ್ಎಸ್ಎಲ್ ಸಿ ಮುಗಿಸಿದ ಬಳಿಕ ಇವರಿಗೆ ಕರ್ನಾಟಕದ ಯಾವುದೇ ಪಿಯುಸಿ ಕಾಲೇಜು ಅಥವಾ ವೃತ್ತಿಪರ ಶಿಕ್ಷಣ ಸಂಸ್ಥೆಗಳು ಇವರಿಗೆ ಪ್ರವೇಶ ನಿರಾಕರಿಸುತ್ತಿದೆ. ಕರ್ನಾಟಕ ಸರಕಾರ ಈ ವಿಷಯದಲ್ಲಿ ಕಣ್ಮುಚ್ಚಿ ಕುಳಿತಿದೆ.
ತಮ್ಮ ಗ್ರಾಮಗಳನ್ನು ಕರ್ನಾಟಕ ಸರ್ಕಾರ ಗಡಿಗ್ರಾಮಗಳೆಂದು ರಾಜ್ಯ ಪತ್ರದಲ್ಲಿ ಸೇರಿಸಿ ಸುತ್ತೋಲೆ ಹೊರಡಿಸದೇ ಇರುವುದರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ತಮ್ಮ ಮಕ್ಕಳಿಗೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡದೇ ಇರುವುದರಿಂದ ಈ ತೀರ್ಮಾನಕ್ಕೆ ಬಂದಿರುವುದಾಗಿ ಹೇಳಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಪ್ರತಿ ವರ್ಷ ಈ ಗಡಿಗ್ರಾಮಗಳಿಗೆ ಆಗಮಿಸಿ ಕನ್ನಡ ಪಠ್ಯ ಪುಸ್ತಕಗಳನ್ನು ವಿತರಿಸುವುದಷ್ಟೇ ಕರ್ನಾಟಕ ಸರ್ಕಾರ ಈ ಗಡಿನಾಡ ಕನ್ನಡಿಗರ ಮೇಲೆ ತೋರುವ ಕಾಳಜಿಯಾಗಿದೆ. ಇದಕ್ಕಿಂತ ಇನ್ನೇನನ್ನೂ ಮಾಡದಿರುವುದು ಗಡಿನಾಡ ಕನ್ನಡಿಗರ ದುರದೃಷ್ಟಕರ.
ಗಡಿ ಭಾಗದಲ್ಲಿ ಕಷ್ಟದ ಬದುಕು ಸಾಗಿಸುತ್ತಿರುವ ಈ ಜನರ ಬದುಕಿಗೆ ಆಸರೆಯಾಗಲು ಕರ್ನಾಟಕ ಸರ್ಕಾರ ಅವಶ್ಯ ಕ್ರಮ ಕೈಗೊಳ್ಳಬೇಕು. ಗಡಿಗ್ರಾಮಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚದಂತೆ ಮುಂದಾಗಬೇಕು ಎಂದು ಕೆ.ಆಂಜನೇಯ ಯಾದವ, ಬದ್ದೇಪಲ್ಲಿ, ಯಾದಗಿರಿ ಅವರು ಕೋರಿದ್ದಾರೆ.












Click it and Unblock the Notifications