ಹಳೆಯ ಗಂಡನ ಪಾದವೂ ಗತಿಯಿಲ್ಲದವಳ ದುರಂತ ಕಥೆ

Old husband also abandons wife, tragic story in real life
ಮೀರತ್, ಜೂ. 28 : ಆತ ಆಕೆಯ ಅಕ್ಕಳನ್ನು ಮದುವೆಯಾಗಬೇಕಿತ್ತು. ಆದರೆ, ಅಕ್ಕ ಪ್ರಿಯತಮನೊಡನೆ ಓಡಿಹೋಗಿದ್ದರಿಂದ ಆತ ತಂಗಿಯನ್ನು ಮದುವೆಯಾಗಬೇಕಾಯಿತು. ಆದರೆ, ತಂಗಿಯೂ ಇನ್ನೊಬ್ಬನೊಡನೆ ಸಿಕ್ರೆಟ್ ಆಗಿ ಮದುವೆಯಾಗಿದ್ದರಿಂದ ಹೆಂಡತಿಯನ್ನೇ ಆತ ತಂಗಿಯನ್ನಾಗಿ ಸ್ವೀಕರಿಸಿ, 'ತಂಗಿ'ಯನ್ನು ಆಕೆಯ ಪ್ರಿಯತಮನಿಗೆ ಒಪ್ಪಿಸಿ ನಿಜಕ್ಕೂ ತ್ಯಾಗರಾಜನಾದ. ಆದರೆ, ಕೊನೆಗೆ ಆ 'ತಂಗಿ'ಯ ಗಂಡನೂ ಆಕೆಯನ್ನು ಕೈಬಿಟ್ಟುಬಿಡುತ್ತಾನೆ...

ಇದು ಯಾವುದೇ ಬಾಲಿವುಡ್ ಬ್ಲಾಕ್ ಬಸ್ಟರ್ ಸಿನೆಮಾಗಾಗಿ ಸೃಷ್ಟಿಸಿದ ಕಥೆಯಲ್ಲ. ಪಕ್ಕಾ ಬ್ಲಾಕ್ ಬಸ್ಟರ್ ಸಿನೆಮಾ ಮಾಡಬಹುದಾಗ ಪಕ್ಕಾ ರಿಯಲ್ ಸ್ಟೋರಿ. ಎಲ್ಲಿ ರಾಮ್ ಗೋಪಾಲ್ ವರ್ಮಾ? ಎಲ್ಲಿ ರಿಯಲ್ ಸ್ಟಾರ್ ಉಪೇಂದ್ರ? ನಿಜವಾದ ಕಥೆ ಈ ರೀತಿಯ ತಿರುವು ಮುರುವುಗಳನ್ನು ಪಡೆಯುತ್ತದೆಂದು ಈ ಕಥೆಯ ನಾಯಕ ನಾಯಕಿಯರಾದ ತ್ಯಾಗಿ ಮತ್ತು ಆರತಿ ಖಂಡಿತ ನಿರೀಕ್ಷಿಸಿರಲಿಲ್ಲ.

ಇಬ್ಬರನ್ನೂ ಕೂಡಿಸಿಕೊಂಡು ಮದುವೆ ಕೌನ್ಸೆಲರ್ ಮಾತನಾಡಿದ ನಂತರ, ರಾಖಿಯನ್ನು ಕಟ್ಟಿಸಿಕೊಂಡು ತ್ಯಾಗಿಯಾದ ನಿತೀಶ್ ತ್ಯಾಗಿ 'ತಂಗಿ'ಯಾದ ಆರತಿಯನ್ನು ಮತ್ತೆ ಹೆಂಡತಿಯಾಗಿ ಸ್ವೀಕರಿಸಲು ತಯಾರಿಲ್ಲ. ಅದೇನು ಕಾರಣವೋ ಏನೋ, ತನಗೆ ಪ್ರಾಣಬೆದರಿಕೆಯಿದೆ ಎಂದು ಆರತಿಯ ಹಳೆಯ ಗಂಡ ವಿನೀತ್ ಆಕೆಯನ್ನು ಸ್ವೀಕರಿಸಲು ಒಪ್ಪುತ್ತಿಲ್ಲ.

ಹಳೆಯ ಗಂಡ ಪಾದವೂ ಗತಿಯಿಲ್ಲ, ಅಣ್ಣನಾದ ಎರಡನೆಯ ಗಂಡನ ಪಾದವೂ ಗತಿಯಿಲ್ಲ ಎಂಬಂತಹ ತ್ರಿಶಂಕು ಸ್ಥಿತಿಯಲ್ಲಿ ಆರತಿ ನಿಂತಿದ್ದಾಳೆ. ಸದ್ಯಕ್ಕೆ ಆಕೆ ಏನು ಮಾಡಬೇಕು? ಯಾರ ಬಳಿಗೆ ಹೋಗಬೇಕು?

* ರಾಖಿ ಕಟ್ಟಿದ 'ಅಣ್ಣ'ನ ಜೊತೆಗಿರಬೇಕಾ?
* ನಿನ್ನನ್ನು ಬಿಡಲಾರೆನೆಂದು ಹಳೆಯ ಗಂಡನ ಜೊತೆಗಿರುವೆನೆಂದು ಹಠ ಹಿಡಿಯಬೇಕಾ?
* ಇಬ್ಬರ ಗಂಡಂದಿರ ಸಹವಾಸವೇ ಬೇಡವೆಂದು ಸ್ವತಂತ್ರ ಜೀವನ ನಡೆಸಬೇಕಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+