ಜಿಟಿಜಿಟಿ ಮಳೆಯಲ್ಲಿ ಯಡಿಯೂರಪ್ಪರಿಂದ ದೇವರ ದರ್ಶನ, ಆಣೆ ಇಲ್ಲ
ಧರ್ಮಸ್ಥಳ,
ಜೂನ್ 27: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಶಾಸಕರ ಪಡೆಯೊಂದಿಗೆ ಶ್ರೀ ಮಂಜುನಾಥನ ಸ್ವಾಮಿಯ ದರ್ಶನಕ್ಕೆ ಸೋಮವಾರ ಬೆಳಗ್ಗೆ ದೇವಸ್ಥಾನದ ಮುಂದೆ ಬಸ್ಸಿನಲ್ಲಿ ಬಂದು ಇಳಿದರು. ಜಿಟಿಜಿಟಿ ಮಳೆಯಲ್ಲೇ ಜಿಲ್ಲಾಡಳಿತ ಮುಖ್ಯಮಂತ್ರಿಗೆ ಗೌರವ ಅರ್ಪಿಸಿತು. id="toptextpromo">ರಾಮಚಂದ್ರೇಗೌಡ,
ರೇಣುಕಾಚಾರ್ಯ ಸೇರಿದಂತೆ ಬಹುತೇಕ ಸಚಿವರ ದಂಡಿನೊಂದಿಗೆ ದೇವಸ್ಥಾನದಲ್ಲಿ 9.09ಕ್ಕೆ ಸರಿಯಾಗಿ ಒಳ ಪ್ರವೇಶಿಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ದೇವಸ್ಥಾನದಲ್ಲಿ ತಂಗಲಿದ್ದು, ಬಳಿಕ ಸುದ್ದಿಗೋಷ್ಠಿ ನಡೆಸಿ, ಕುಕ್ಕೆ ಸುಬ್ರಮಣ್ಯದತ್ತ ಪ್ರಯಾಣ ಮಾಡಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಮಧ್ಯೆ, ಬೆಳಗ್ಗೆಯಿಂದಲೇ ಸಾರ್ವಜನಿಕರಿಗೆ ದೇಗುಲ ಪ್ರವೇಶವನ್ನು ತಡೆಹಿಡಿಲಾಗಿದೆ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರು ಶ್ರೀಕ್ಷೇತ್ರದಿಂದ ಹೊರನಡೆದ ಬಳಿಕವಷ್ಟೇ ಭಕ್ತರಿಗೆ ಮಂಜುನಾಥ ಸ್ವಾಮಿ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು ಎಂದು ದೇವಸ್ಥಾನದ ಮೂಲಗಳು ಹೇಳಿವೆ.











Click it and Unblock the Notifications