ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪನವರ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಪ್ರವಾಸ ವಿವರ

By Prasad
|
Google Oneindia Kannada News

Yeddyurappa Dharmasthala itinerary
ಬೆಂಗಳೂರು, ಜೂ. 26 : ಕುಮಾರಸ್ವಾಮಿ ಅವರ ಧರ್ಮಸ್ಥಳ 'ತೀರ್ಥಯಾತ್ರೆ' ಈಗಾಗಲೆ ಆರಂಭವಾಗಿದೆ. ಮಂಜುನಾಥನ ಸನ್ನಿಧಿಗೆ ಅವರು ತಲುಪಿರಲೂಬಹುದು. ಆದರೆ, ಅವರಿಗೆ ಆಣೆ ಪ್ರಮಾಣದ ಸವಾಲು ಎಸೆದು, ಈಗ ಹಿಂದೆ ಸರಿದಿರುವ ಯಡಿಯೂರಪ್ಪ ಅವರ ಕಾರ್ಯಕ್ರಮ ಯಾವ ರೀತಿಯಿದೆ? ಇದು ಅನೇಕರಿಗೆ ಉದ್ಭವವಾಗಿರುವ ಸಹಜ ಪ್ರಶ್ನೆ.

ಆಣೆ ಬಿಡಬೇಕೆಂಬ ಬಿಜೆಪಿ ವರಿಷ್ಠರ, ಸ್ವಾಮೀಜಿಗಳ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿರುವ ಯಡಿಯೂರಪ್ಪ ಧರ್ಮಸ್ಥಳಕ್ಕೆ ಸೋಮವಾರ ಜೂ.27ರಂದು ತಲುಪಿ, ಮಂಜುನಾಥನಿಗೆ ಕೈಮುಗಿದು, ಹೆಚ್ಚು ಕಾಲ ಕಳೆಯದೆ ಕುಕ್ಕೆ ಸುಬ್ರಮಣ್ಯಕ್ಕೆ ಪ್ರಯಾಣ ಮುಂದುವರಿಸಲಿದ್ದಾರೆ. ಅಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ.

ಧರ್ಮಸ್ಥಳದಲ್ಲಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಮುಖಾಮುಖಿಯಾಗಲಿದ್ದಾರಾ? ಇಬ್ಬರೂ ಮಂಜುನಾಥನಿಗೆ ಏನು ಭಿನ್ನಹ ಮಾಡಲಿದ್ದಾರೆ? ಇದು ಸದ್ಯಕ್ಕೆ ಬಹಿರಂಗವಾಗದ ವಿಚಾರ. ಸದ್ಯಕ್ಕೆ ಯಡಿಯೂರಪ್ಪನವರು ಕೆಲ ಆಯ್ದ ಸಚಿವರೊಂದಿಗೆ ಸಿಟಿ ರೈಲು ನಿಲ್ದಾಣದಿಂದ ಕಣ್ಣೂರು ಎಕ್ಸ್ ಪ್ರೆಸ್ ರೈಲು ಮುಖಾಂತರ ಧರ್ಮಸ್ಥಳಕ್ಕೆ ಪ್ರಯಾಣ ಆರಂಭಿಸಿಯಾಗಿದೆ. ನಾಳೆ ಏನಾಗುತ್ತೆ ಕಾದು ನೋಡಿ. ಅಲ್ಲಿಯವರೆಗೆ, ಯಡಿಯೂರಪ್ಪನವರ ಕಾರ್ಯಕ್ರಮದತ್ತ ಕಣ್ಣು ಹಾಯಿಸಿ.

* ಸಂಜೆ 8.50ಕ್ಕೆ ಕಣ್ಣೂರು ಎಕ್ಸ್ ಪ್ರೆಸ್ ರೈಲು ಬೆಂಗಳೂರು ನಿಲ್ದಾಣ ಬಿಟ್ಟಿದೆ.
* ಬೆಳಿಗ್ಗೆ 6.63ಕ್ಕೆ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಲಿದೆ.
* 10ಕ್ಕೆ ಮಂಜುನಾಥನ ದರ್ಶನ ಮತ್ತು ಪೂಜಾ ಕಾರ್ಯಕ್ರಮ.
* ಮಧ್ಯಾಹ್ನ 1 ಗಂಟೆಗೆ ರಸ್ತೆಯ ಮೂಲಕ ಕುಕ್ಕೆ ಸುಬ್ರಮಣ್ಯಕ್ಕೆ ಪಯಣ.
* 2.05ಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ.
* 3.30ಕ್ಕೆ ಕುಕ್ಕೆ ಸುಬ್ರಮಣ್ಯ ಸ್ವಾಮಿಗೆ ವಿಶೇಷ ಪೂಜೆ.
* ಸಂಜೆ 5.30ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ಬೆಂಗಳೂರಿಗೆ ವಾಪಸ್...

English summary
Here is Dharmasthala tour itinerary of BS Yeddyurappa. BSY will be visiting Dharmasthala on June 27 as scheduled, but will offer pooja only, no truth test. He will be proceeding towards Kukke Subramanya for laying foundation stone for development work. Will be back in Bangalore from Mangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X