ಕರಾವಳಿ ಪ್ರಾಧಿಕಾರಕ್ಕೆ ನಾಗರಾಜ ಶೆಟ್ಟಿ ರಾಜೀನಾಮೆ?

ತಮ್ಮ ಸ್ವಕ್ಷೇತ್ರ ಬಂಟ್ವಾಳದಲ್ಲಿ ತಮ್ಮವರಿಂದಲೇ ಟೀಕೆಗೆ ಒಳಗಾಗಿದ್ದು, ಇದರಿಂದ ಮನನೊಂದು ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ. ರಾಜೀನಾಮೆ ಪತ್ರವನ್ನು ಪಕ್ಷದ ಅಧ್ಯಕ್ಷರಿಗೆ ಮತ್ತು ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ, ಆದರೆ ಅಂಗೀಕಾರವಾಗಿಲ್ಲ.
ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದು ಅಲ್ಲಿ ತಮ್ಮನ್ನು ಭೇಟಿ ಮಾಡುವಂತೆ ತಿಳಿಸಲಾಗಿದೆ. ಬಹುತೇಕ ರಾಜೀನಾಮೆ ವಿಚಾರ ಅಲ್ಲಿ ಬಗೆಹರಿಯುವ ಸಾಧ್ಯತೆಯಿರುವುದಾಗಿ ಬಿಜೆಪಿ ಮೂಲಗಳು ಹೇಳುತ್ತಿವೆ.
ಈ ಮೊದಲು ಸಚಿವರಾಗಿದ್ದ ನಾಗರಾಜ ಶೆಟ್ಟರು ಸ್ವಪಕ್ಷೀಯರಿಂದ ಟೀಕೆಗೆ ಒಳಗಾಗಿ ಸಚಿವ ಪದವಿಗೆ ರಾಜೀನಾಮೆ ಕೊಟ್ಟು ನಿಗೂಢ ಸ್ಥಳದಲ್ಲಿ ಕೆಲವು ದಿನ ಕಳೆದಿದ್ದರು. ಆಗಲೂ ಯಡಿಯೂರಪ್ಪ ಅವರ ಸಂಧಾನದಿಂದ ರಾಜೀನಾಮೆ ಹಿಂದಕ್ಕೆ ಪಡೆದಿದ್ದರು. ಈ ಸಲವೂ ಅದೇ ಪುನರಾವರ್ತನೆ ಆಗಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.











Click it and Unblock the Notifications