ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತೂ ಗೂಗಲ್ ಟ್ರಾನ್ಸ್ ಲೇಟ್ ನಲ್ಲಿ ಕನ್ನಡ ಭಾಷೆ

By Mahesh
|
Google Oneindia Kannada News

Google Translate Suport Kannada
ಬೆಂಗಳೂರು ಜೂ 22: ಮಂಗಳವಾರದ ದಿನ ಮಂಗಳಕರ ಸುದ್ದಿಯನ್ನು ಗೂಗಲ್ ಸಂಸ್ಥೆ ಕನ್ನಡಿಗರಿಗೆ ನೀಡಿದೆ. ಬಹು ನಿರೀಕ್ಷಿತ ಗೂಗಲ್ ಟ್ರಾನ್ಸ್ ಲೇಟ್ ಸೇವೆ ಪಟ್ಟಿ ಕನ್ನಡ ಭಾಷೆಯನ್ನು ಸೇರಿಸಲಾಗಿದೆ. ಇದರ ಜೊತೆಗೆ ಬೆಂಗಾಳಿ, ಗುಜರಾತಿ, ತಮಿಳು ಹಾಗೂ ತೆಲುಗು ಭಾಷೆಯಲ್ಲೂ ಈ ಸೇವೆ ಲಭ್ಯವಾಗಲಿದೆ ಎಂದು ಗೂಗಲ್ ಸಂಸ್ಥೆ ತಿಳಿಸಿದೆ.

ಗೂಗಲ್ ಟ್ರಾನ್ಸ್ ಲೇಟ್ ಗ್ರಾಹಕ ಸ್ನೇಹಿ ಸಾಧನವಾಗಿದ್ದು, ಪ್ರಾದೇಶಿಕ ಭಾಷೆಗಳ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ಮೇಲಿನ ಐದು ಭಾಷೆಗಳಿಂದ ಇತರೆ ಭಾಷೆಗಳಿಗೆ ಈಗ ಸುಲಭವಾಗಿ ಭಾಷಾಂತರ ಮಾಡಬಹುದಾಗಿದೆ. ಈ ಟ್ರಾನ್ಸ್ ಲೇಟ್ ಟೂಲ್ ಮೂಲಕ ತನ್ನ ಗ್ರಾಹಕರ ಸಂಖ್ಯೆಯನ್ನು ಇನ್ನೂ 500 ಮಿಲಿಯನ್ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಹೊಂದಲಾಗಿದೆ.

ಸುಮಾರು 63 ಭಾಷೆಗಳಲ್ಲಿ ಈ ಟ್ರಾನ್ಸ್ ಲೇಟ್ ಟೂಲ್ ಲಭ್ಯವಿದ್ದು, ಆರಂಭದ ಹಂತದ ಭಾಷೆಗಳೇ ಹೆಚ್ಚಾಗಿದೆ(alpha languages) ಹಾಗಾಗಿ ಸ್ಪಾನೀಷ್ ಹಾಗು ಚೈನೀಸ್ ಗೆ ಹೋಲಿಸಿದರೆ ಉಳಿದ ಭಾಷಾಂತರದಲ್ಲಿ ಕೆಲವು ನ್ಯೂನತೆಗಳು ಹೆಚ್ಚಾಗಿ ಕಂಡು ಬರುತ್ತವೆ ಎಂದು ಗೂಗಲ್ ಸಂಶೋಧನೆ ವಿಜ್ಞಾನಿ ಆಶೀಶ್ ವೇಣು ಗೋಪಾಲ್ ಹೇಳುತ್ತಾರೆ.

ಭಾಷಾಂತರದಲ್ಲಿ ದೋಷಗಳು ಕಂಡು ಬಂದರೆ ನಮಗೆ ತಪ್ಪದೇ ತಿಳಿಸಿ, ಸದ್ಯಕ್ಕೆ ಇಂಡಿಕ್(ಇಂಡೋ ಆರ್ಯನ್ ಭಾಷೆ) ಇನ್ ಪುಟ್ ಮಾದರಿ ಇನ್ ಸ್ಕಿಪ್ಟ್ ಹಾಗೂ ಫೊನೆಟಿಕ್ ಕೀ ಬಳಸಿ ಟ್ರಾನ್ಸ್ ಲಿಟರೇಷನ್ ಮೂಲಕ ಕೀ ಮಾಡಬಹುದು. ಪ್ರತಿ ಭಾಷೆ ಕೂಡಾ ತನ್ನದೇ ಆದ ವಿಶಿಷ್ಟ ಶೈಲಿ, ಲಿಪಿ ಹೊಂದಿದೆ. ಎಲ್ಲವನ್ನು ಅಳವಡಿಸುವುದು ಸವಾಲಿನ ಕೆಲಸವಾಗಿತ್ತು ಎಂದು ವೇಣು ಹೇಳಿದ್ದಾರೆ.

ಗೂಗಲ್ ಟ್ರಾನ್ಸ್ ಲೇಟ್ ಗಾಗಿ

English summary
The local Indian languages will not be a barrier for you anymore. The web-search giant Google announced the expansion of its translation services to include five more Indian languages, Bengali, Gujarati, Kannada, Tamil and Telugu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X