ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

31,500 ಉದ್ಯೋಗಿಗಳ ಕಳೆದುಕೊಂಡ ಟಿಸಿಎಸ್

By Mahesh
|
Google Oneindia Kannada News

31,500 Employees quit TCS
ನವದೆಹಲಿ, ಜೂ 22: ದೇಶದ ಅತೀ ದೊಡ್ಡ ಸಾಫ್ಟ್ ವೇರ್ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ನ 31,500 ನೌಕರರು 2010-11 ನೇ ಸಾಲಿನಲ್ಲಿ ಕಂಪೆನಿ ತ್ಯಜಿಸಿದ್ದಾರೆ. ಈ ಅವಧಿಯಲ್ಲಿ ಕಂಪೆನಿ ತನ್ನ ಭಾರತ ಹಾಗೂ ವಿದೇಶದ ಕಚೇರಿಗಳಿಗೆ 69,685 ಹೊಸ ನೌಕರರನ್ನು ನೇಮಕ ಮಾಡಿಕೊಂಡಿದೆ.

ಈ ಮಾಹಿತಿಯಿಂದ ದೇಶದ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಹುದ್ದೆ ತೊರೆಯುವವರ ಸಂಖ್ಯೆ ಹೆಚ್ಚಾಗಿರುವುದು ನಿಜವಾಗಿದೆ. ತನ್ನ ವಾರ್ಷಿಕ ವರದಿಯಲ್ಲಿ ಈ ವಿಷಯ ತಿಳಿಸಿರುವ ಕಂಪೆನಿ ಏಪ್ರಿಲ್ 1, 2010ರಲ್ಲಿ ಕಂಪೆನಿ ಒಟ್ಟು 1,60,429 ನೌಕರರನ್ನು ಹೊಂದಿದ್ದು ಈ ಸಂಖ್ಯೆ 2011 ರ ಮಾರ್ಚ್ ಗೆ 1,98,614 ಕ್ಕೇರಿದೆ ಎಂದು ತಿಳಿಸಿದೆ.

ಕಂಪೆನಿ ಕಳೆದ ಸಾಲಿನಲ್ಲಿ ದೇಶದಲ್ಲಿ 62,092 ಹಾಗೂ ವಿದೇಶಗಳಲ್ಲಿ 7,593 ನೌಕರರನ್ನು ಸೇರ್ಪಡೆ ಮಾಡಿಕೊಂಡಿದೆ ಎಂದು ತಿಳಿಸಿದೆ. ದೇಶದಲ್ಲಿ ಹೊಸದಾಗಿ ನೇಮಕ ಮಾಡಿಕೊಂಡ ನೌಕರರಲ್ಲಿ 26,899 ನೌಕರರು ಕೆಲಸ ತೊರೆದಿದ್ದಾರೆ. ವಿದೇಶಗಳಲ್ಲಿ 4,601 ನೌಕರರು ಕೆಲಸ ತೊರೆದಿದ್ದು ಒಟ್ಟು 2,992 ನೌಕರರನ್ನು ನಿವ್ವಳವಾಗಿ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಕಂಪೆನಿ ತಿಳಿಸಿದೆ.

English summary
During 2010-11 financial year Tata Consultancy Services(TCS) has lost 31,500 employees. TCS admitted Indian IT Industry is facing high Attrition. But Company hired 69,685 new employees in India and overseas during last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X