ಸತ್ಯ ಸಾಯಿ ಬಾಬಾ ರಹಸ್ಯ ಬಹಿರಂಗಕ್ಕೆ ಮಹೂರ್ತ ಫಿಕ್ಸ್

ಬಾಬಾರ ಕನಸಿನ ಕೂಸಾದ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಲಕ್ಷಾಂತರ ಡಾಲರ್ ಗಳನ್ನು ಸುರಿದಿರುವ ಈ ಮಹಾನ್ ಭಕ್ತ, ಸದ್ಯ ಪ್ರಶಾಂತಿ ನಿಲಯಂನಲ್ಲಿ ನೆಲೆಸಿದ್ದಾರೆ. ಬಾಬಾ ಅವರ ಉತ್ತರಾಧಿಕಾರಿ ಯಾರು? ಟ್ರಸ್ಟ್ ಹಾಗೂ ಆಶ್ರಮಕ್ಕೆ ಯಾರು ದಿಕ್ಕು? ಮುಂತಾದ ಬಗೆಹರಿಯದ ಪ್ರಶ್ನೆಗಳಿಗೆ ಸ್ವತಃ ಬಾಬಾ ಉತ್ತರ ನೀಡಿದ್ದಾರೆ. ಬಾಬಾ ನನಗೆ ನೀಡಿರುವ ರಹಸ್ಯ ಸಂದೇಶವನ್ನು ಸೂಕ್ತ ದಿನದಂದು ಪ್ರಕಟಿಸುತ್ತೇನೆ ಎಂದು ಐಸಾಕ್ ಹೇಳಿದ್ದಾರೆ.
ಆದರೆ, ಐಸಾಕ್ ಅವರ ಹೇಳಿಕೆಯನ್ನು ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ತಳ್ಳಿ ಹಾಕಿದ್ದು, ಬಾಬಾ ಯಾವುದೇ ರಹಸ್ಯ ಇಟ್ಟುಕೊಂಡಿಲ್ಲ. ಇದು ಐಸಾಕ್ ಅವರ ವೈಯಕ್ತಿಕ ಅನುಭವ ಇದಕ್ಕೂ ಟ್ರಸ್ಟ್ ಆಡಳಿತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಟ್ರಸ್ಟಿ ನಾಗಾನಂದ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಬಾಬಾ ಆಸ್ತಿ ಅಕ್ರಮ ಸಾಗಾಣಿಕೆ ಆರೋಪದ ಮೇಲೆ ಬಾಬಾ ಅವರ ಸಂಬಂಧಿ ಹಾಗೂ ಪ್ರಮುಖ ಟ್ರಸ್ಟಿ ರತ್ನಾಕರ್ ಅವರಿಗೆ ಆಂಧ್ರ ಪೊಲೀಸರು ನೋಟಿಸ್ ನೀಡಿದ್ದಾರೆ. ಉಡುಪಿ ಮೂಲದ ವ್ಯಕ್ತಿಯನ್ನು ಬಂಧಿಸಿ ಟ್ರಸ್ಟ್ ಗೆ ಸೇರಿದ್ದ 35.5 ಲಕ್ಷ ರು ಅನ್ನು ವಶಪಡಿಸಿಕೊಳ್ಳಲಾಗಿತ್ತು. ಬಾಬಾ ಅವರ ಯಜುರ್ ಮಂದಿರದಲ್ಲಿ 11.56 ಕೋಟಿ ನಗದು, 98 ಕೆಜಿ ಚಿನ್ನ ಹಾಗೂ ಆಭರಣ, 307 ಕೆಜಿ ಬೆಳ್ಳಿ ಪದಾರ್ಥ ಸೇರಿದಂತೆ ಅಮೂಲ್ಯ ವಸ್ತುಗಳು ಕಾಣಿಸಿತ್ತು.












Click it and Unblock the Notifications