ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಯಡಿಯೂರಪ್ಪ ಮಾನ ಹರಾಜು ಹಾಕಿದ ಎಚ್ಡಿಕೆ

By Mahesh
|
Google Oneindia Kannada News

Hd Kumaraswamy Press meet on yeddyurappa Scams
ನವದೆಹಲಿ ಜೂ 22: ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅಕ್ರಮಗಳ ಬಗ್ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ದಾಖಲೆಗಳನ್ನು ಬಹಿರಂಗಪಡಿಸಿದ್ದಾರೆ. ಅಕ್ರಮ ಗಣಿಗಾರಿಕೆ, ಭೂ ಹಗರಣ ಸೇರಿದಂತೆ ಹಲವಾರು ಅಕ್ರಮ ಕೃತ್ಯಗಳಲ್ಲಿ ಯಡಿಯೂರಪ್ಪ ಭಾಗಿಯಾಗಿದ್ದಾರೆ ಎಂದು ಸಾಬೀತು ಪಡಿಸಲು ಅಗತ್ಯವಿರುವ ದಾಖಲೆಗಳನ್ನು ಎಚ್ಡಿಕೆ ಸುದ್ದಿಗಾರರಿಗೆ ಒದಗಿಸುತ್ತಿದ್ದಾರೆ. ಸುದ್ದಿಗೋಷ್ಠಿ ಜಾರಿಯಲ್ಲಿದ್ದು, ಸುದ್ದಿ ಅಪ್ದೇಡ್ ಗಾಗಿ ನಿರೀಕ್ಷಿಸುತ್ತಿರಿ...

ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1 ರಾಜ್ಯ ಎಂದು ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹರ್ ಅವರು ಹೇಳಿದ್ದಾರೆ. ದೇಶದ ಪ್ರಮುಖ ವಾರಪತ್ರಿಕೆಗಳಲ್ಲೂ ರಾಜ್ಯದ ಮಾನ ಹರಾಜಾಗಿದೆ. ಮುಖ್ಯಮಂತ್ರಿ ವಿರುದ್ಧ ಆರೋಪ ಮಾಡಿದಾಗೆಲ್ಲ ದಾಖಲೆ ಒದಗಿಸುವಂತೆ ಮಾಧ್ಯಮ ಮಿತ್ರರು ಕೇಳುತ್ತಿದ್ದು. ಈಗ ಕಾಲ ಕೂಡಿ ಬಂದಿದೆ.

* ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಯಾದವಾಡದಲ್ಲಿರುವ ರತ್ನ ಸಿಮೆಂಟ್ ಕಾರ್ಖಾನೆ 1,417 ಎಕರೆ ಗಣಿ ಭೂಮಿ ನೀಡಿಕೆ.
* 1979 ನಲ್ಲಿ ಆರಂಭವಾದ ರತ್ನ ಸಿಮೆಂಟ್ ಕಾರ್ಖಾನೆ ನಷ್ಟ ಹೊಂದಿದಾಗ ಯಡಿಯೂರಪ್ಪ ಅವರು ಸಾಲ ಮನ್ನಾ ಮಾಡಿ ಮೇಲಕ್ಕೆತ್ತಿದರು. ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಸೇರಿದ ಈ ಕಾರ್ಖಾನೆಗೆ ಬಿಟ್ಟಿ ಸೌಲಭ್ಯಗಳು ತಾನಾಗೇ ಒದಗಿ ಬಂದಿತು.
* 2006ರಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಅವರು ನಾಯ್ಡು ಅವರ ಕುಟುಂಬದವರಿಗೆ ಅಕ್ರಮವಾಗಿ ಗಣಿ ಗುತ್ತಿಗೆ ನೀಡಿದ್ದಾರೆ
* ಕೆಎಸ್ ಐಐಡಿಸಿ, ರತ್ನ ಸಿಮೆಂಟ್ ಕಾರ್ಖಾನೆಗೆ ನೀಡಿದ 20 ತ್ರೈಮಾಸಿಕ ಕಾಲಾವಧಿಯಲ್ಲಿ ಸಾಲ ತೀರಿಸಬೇಕಿತ್ತು. ಆದರೆ, ಯಡಿಯೂರಪ್ಪ ಸಾಲ ಮನ್ನಾ ಮಾಡಿದರು. ನಂತರ ಕಂಪೆನಿಯನ್ನು ಸ್ವಾಧೀನ ಪಡಿಸಿಕೊಂಡರು.
* 4.8 ಕೋಟಿ ರು ಸಾಲ ಹಾಗೂ 7.5 ಕೋಟಿ ರು ಬಡ್ಡಿ ಮನ್ನಾ ಮಾಡಿದ ಯಡಿಯೂರಪ್ಪ ಅವರಿಗೆ ಕಂಪೆನಿ ಷೇರುಗಳನ್ನು ನೀಡಲಾಗಿದೆ.
* ಎರಡು ವರ್ಷಗಳಿಂದ ಬ್ಯಾಲೆನ್ಸ್ ಷೀಟ್ ಸಲ್ಲಿಸದ ಕೋಲ್ಕತ್ತಾದಲ್ಲಿರುವ ಇಂದ್ರವೀರ್ ಕುಟೀರ ಕಂಪೆನಿ. ಇದು ಯಡಿಯೂರಪ್ಪ ಅವರ ಮಕ್ಕಳ ಕಂಪೆನಿ.

ಯಡಿಯೂರಪ್ಪ ಹಾಗೂ ಅವರ ಮಕ್ಕಳು ಟ್ರಸ್ಟಿಯಾಗಿರುವ ಪ್ರೇರಣಾ ಟ್ರಸ್ಟ್ ಗೆ 27 ಕೋಟಿ ರು ಹವಾಲಾ ಹಣ ಸಿಕ್ಕಿರುವುದನ್ನು ಬಹಿರಂಗಪಡಿಸಿದ್ದ ಕುಮಾರಸ್ವಾಮಿ, ಇಂದು 80 ಕೋಟಿ ರು ಅಧಿಕ ಅವ್ಯವಹಾರದಲ್ಲಿ ಭಾಗಿಯಾಗಿರುವ ದಾಖಲೆಗಳನ್ನು ಬಿಚ್ಚಿಟ್ಟರು. ದೆಹಲಿಯಲ್ಲಿರುವ ನಾಯಕರು ಯಡಿಯೂರಪ್ಪ ಅವರ ಅಕ್ರಮಕ್ಕೆ ರಕ್ಷಣೆ ನೀಡುತ್ತಿದ್ದಾರೆ. ಕೇಂದ್ರದ ಬಿಜೆಪಿ ನಾಯಕರ ಬ್ಯಾಂಕ್ ಖಾತೆಗಳನ್ನು ಹುಡುಕಿದರೆ ಇನ್ನಷ್ಟು ವಿಷಯ ಹೊರ ಬರಲಿದೆ ಎಂದು ಕುಮಾರಸ್ವಾಮಿ ಹೇಳಿದರು.

English summary
Ex Chief Minister HD Kumaraswamy today released documents supporting allegation on Yeddyurappa involved in various scams. Documents related to Land Scam, illegal mining by Yeddyurappa are released
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X