ಮಂಪರು ಪರೀಕ್ಷೆಗೂ ಸಿದ್ದ, ಎಚ್ಡಿಕೆ ಮತ್ತೊಂದು ಸವಾಲ್

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು ಈ ವಿಚಾರದ ಕುರಿತು ಯಾವುದೇ ತನಿಖೆಗೂ ಸಿದ್ಧ ಎಂದು ಹೇಳಿದರು. 'ದೇವರ ಮೇಲೆ ಆಣೆ, ಪ್ರಮಾಣಗಳನ್ನು ಮಾಡುವುದು ಸಂವಿಧಾನದ ಚೌಕಟ್ಟಿನಲ್ಲಿ ಬಾಲಿಶವಾಗಿ ಕಾಣುತ್ತದೆ. ಆದರೂ ಈ ಸವಾಲನ್ನು ಸ್ವೀಕರಿಸಿದ್ದೇನೆ. ಕಳೆದ 14ರಂದು ನೀಡಿದ ಹೇಳಿಕೆಗೆ ಬದ್ಧನಾಗಿರುವೆ'.
'ಮನಸಾಕ್ಷಿಗೆ ವಿರುದ್ಧವಾಗಿ ನಾನು ಮಾತನಾಡಿಲ್ಲ. ಹಾಗಾಗಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರಾಮನಗರದಲ್ಲಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದು, ರಾಮನಗರದ ಮೂಲಕವೇ ಧರ್ಮಸ್ಥಳಕ್ಕೆ ಪ್ರವಾಸ ಬೆಳೆಸುತ್ತೇನೆ' ಎಂದು ಹೇಳಿದರು.
ನಾನೊಬ್ಬನೇ ಧರ್ಮಸ್ಥಳಕ್ಕೆ ಹೋಗುತ್ತೇನೆ. ನನ್ನ ಕುಟುಂಬವನ್ನು ಕರೆದುಕೊಂಡು ಹೋಗುವುದಿಲ್ಲ. ಈ ವಿಷಯದಲ್ಲಿ ಪ್ರಮುಖವಾಗಿ ಇರುವುದು ಮೂರು ಜನ ಮಾತ್ರ. ಮುಖ್ಯಮಂತ್ರಿ, ನಾನು ಮತ್ತು ವಿಧಾನ ಪರಿಷತ್ತಿನ ಸದಸ್ಯ ಲೆಹರ್ ಸಿಂಗ್. ಧರ್ಮಸ್ಥಳಕ್ಕೆ ಹೋಗಿ ಆಣೆ, ಪ್ರಮಾಣ ಮಾಡಬೇಕಿರುವುದು ಮೂವರೇ. ಬೇಕಿದ್ದರೆ ಮುಖ್ಯಮಂತ್ರಿ ಪರಿವಾರ ಸಮೇತ ಬರಲಿ' ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು
'ಬಿಜೆಪಿ ರಾಜ್ಯ ಘಟಕದ ಖಜಾಂಚಿ ಲೆಹರ್ ಸಿಂಗ್ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ನನ್ನನ್ನು ಬೆಂಗಳೂರು ಮತ್ತು ನವದೆಹಲಿಯಲ್ಲಿ ಭೇಟಿ ಮಾಡಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಈ ಮೂಲಕ ಅವರು ನನ್ನ ವಾದವನ್ನು ಬಹುತೇಕ ಒಪ್ಪಿಕೊಂಡಂತಾಗಿದೆ. 27ರಂದು ಸತ್ಯ ಹೊರಬರುವ ವಿಶ್ವಾಸವಿದೆ. ನ್ಯಾಯಾಂಗ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಲ್ಲ' ಎಂಬ ಅರ್ಥ ನೀಡುವ ಜಾಹೀರಾತನ್ನು ನೀಡಿದ್ದರೂ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು












Click it and Unblock the Notifications