ಮುಖ್ಯಮಂತ್ರಿಗೆ ಸ್ವಾಮಿ ದ್ರೋಹ: 30 ಸಿಬ್ಬಂದಿ ಕಿಕ್ಡ್ ಔಟ್

ಕೊಟ್ಟಕಲ್ ಪ್ರವಾಸ ಮುಂತಾದ ಮಾಹಿತಿಗಳು ದಾಖಲೆ ಸಹಿತ ಬಹಿರಂಗಗೊಂಡಿದ್ದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಈ ಮಾಹಿತಿ ಸೋರಿಕೆಯೇ ಆಣೆ ಪ್ರಮಾಣ ಪ್ರಹಸನಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಂ.ಸಿ.ನಾಗರಾಜ್ ಮತ್ತು ಲಕ್ಷ್ಮಯ್ಯ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಮುಖ್ಯಮಂತ್ರಿಯವರ ಪರಿಹಾರ ನಿಧಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವೀರಪ್ಪ ಮತ್ತು ಶಿವಮಾದು, ಮುಖ್ಯಮಂತ್ರಿಯವರ ಉಪ ಕಾರ್ಯದರ್ಶಿ ಮುಹಮದ್ ಮೊಹಮದ್ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ.
ಈ ಮಧ್ಯೆ, ಸಚಿವಾಲಯದಲ್ಲಿ ಪ್ರಸ್ತುತ 230 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ 150 ಮಂದಿ ಸಾಕು. ಆದ್ದರಿಂದ ಹೆಚ್ಚುವರಿಯಾಗಿದ್ದ 30 ಮಂದಿಯನ್ನು ಮಾತೃ ಇಲಾಖೆಗಳಿಗೆ ವಾಪಸು ಕಳಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ.












Click it and Unblock the Notifications