ಆಣೆ ಮಾಡಲು ಹೋಗುವೆ, ನಾನು ಹೇಳುವುದೆಲ್ಲಾ ಸತ್ಯ: ಎಚ್ಡಿಕೆ

ಲೆಹರ್ ಸಿಂಗ್ ಯಾಕೆ ಬಿಜೆಪಿಯಲ್ಲಿದ್ದಾರೆ. ನನ್ನ ಜೊತೆ ಚರ್ಚೆ ಮಾಡುವ ಅಗತ್ಯ ಏನಿದೆ. ನನಗೆ ದೂರವಾಣಿ ಕರೆ ಮಾಡಿದ್ದು ಸತ್ಯವೋ ಅಲ್ಲವೋ ತಿಳಿಯುತ್ತದೆ. ಲೆಹರ್ ಸಿಂಗ್ ನನ್ನ ಭೇಟಿಯನ್ನು ಒಪ್ಪಿಕೊಂಡಿದ್ದಾರೆ. ಸಾಣೆಹಳ್ಳಿ ಸ್ವಾಮೀಜಿ ಹೇಳಿಕೆ ಸ್ವಲ್ಪ ನೋವು ತಂದಿದೆ. ಅಧಿಕಾರದಲ್ಲಿರಲಿ ಅಥವಾ ಇಲ್ಲದಿರಲಿ, ಜನಸಮಾನ್ಯರ ಬಡವರ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವುದರಲ್ಲಿ ಜೆಡಿಎಸ್ ಎಂದೂ ಮುಂದಿದೆ. ಸ್ವಾಮೀಜಿಗಳಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ.
ಜನತೆ ಸತ್ಯ ತಿಳಿಯಬೇಕಿದೆ: ಏ 5ರಂದು ಬಿಎಸ್ ವೈ ಕಡೆಯವರು ಏಕೆ ಕಾಯುತ್ತಿದ್ದರು. ಸುಮ್ಮನೆ ಆರೋಪ ಮಾಡುತ್ತಿಲ್ಲ. ಇದು ಕೆಸರೆರಚಾಟ ಅಲ್ಲ. ಬಿಜೆಪಿ ಸರ್ಕಾರ ಜನತೆಯನ್ನು ಹೇಗೆ ಲೂಟಿ ಮಾಡುತ್ತಿದ್ದಾರೆ ಎಂಬುದನ್ನು ಜನತೆ ಮುಂದೆ ಇಡುತ್ತಿದ್ದೇನೆ. ದೇವರಿಗಿಂತ ಹೆಚ್ಚಾಗಿ ಜನರ ಮೇಲೆ ಹೆಚ್ಚಿನ ಭಯ ಭಕ್ತಿಯಿದೆ. ಆದರೆ, ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ಆಹ್ವಾನ ಬಂದಾಗ ನಾನು ಹಿಂದೆ ಸರಿದಿದ್ದರೆ ನನ್ನನ್ನು ಜನ ಅನುಮಾನಿಸುತ್ತಿದ್ದರು. ಅದಕ್ಕಾಗಿ ನಾನು ಅವರ ಪಂಥಾಹ್ವಾನವನ್ನು ಒಪ್ಪಿದೆ. ಈ ಹಿಂದೆ ಶೋಭಾ ಅವರು ಕೂಡಾ ಆಣೆ ಮಾಡುವಂತೆ ಆಹ್ವಾನ ನೀಡಿದ್ದರು. ಕಾಫಿ ತೋಟ ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿರುವುದನ್ನು ವಿರೋಧಿಸಿ ಅಹ್ವಾನ ನೀಡಿ ಮರೆತಿದ್ದಾರೆ.
ನಾನು ಆತ್ಮಸಾಕ್ಷಿ ಪೂರ್ವಕವಾಗಿ ಸತ್ಯವನ್ನು ಹೊರಹಾಕುತ್ತಿದ್ದೇನೆ. ಯಡಿಯೂರಪ್ಪ ಅವರಿಗೆ ಕಾನೂನಿನ ಮೇಲೆ ವಿಶ್ವಾಸವಿಲ್ಲವಂತೆ. ಇದಕ್ಕೆ ಕಾನೂನು ತಜ್ಞ ಜೇಟ್ಲಿ ಅವರು ಏನು ಉತ್ತರ ಕೊಡುತ್ತಾರೆ. ಜಾಹೀರಾರು ವೆಚ್ಚ ಭರಿಸುತ್ತೇನೆ ಎಂದು ಹೇಳಿದ್ದಾರೆ. ಅಷ್ಟೂ ಹಣವನ್ನು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications