ಬೆಂಗಳೂರಿನಲ್ಲಿ ಸ್ವಿಸ್ ಆಫೀಸ್, ಹೂಡಿಕೆ ಮಾಡಿ
ಬೆಂಗಳೂರು,
ಜೂನ್ 18: ಉದ್ಯಾನ ನಗರಿಯಲ್ಲಿ ಪ್ರಧಾನ ರಾಯಭಾರಿ ಕಚೇರಿಯನ್ನು ತೆರೆಯಲು ಸ್ವಿಜರ್ ಲ್ಯಾಂಡ್ ನಿರ್ಧರಿಸಿದೆ. ಬೆಂಗಳೂರಿನಲ್ಲಿ ನಿರ್ಮಿಸಲಿರುವ ನೂತನ ರಾಯಭಾರ ಕಚೇರಿಯು ವಹಿವಾಟು, ಹೂಡಿಕೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ ಎಂದು ಭಾರತದಲ್ಲಿರುವ ಸ್ವಿಜರ್ ಲ್ಯಾಂಡ್ ರಾಯಭಾರಿ ಪಿಲಿಪ್ ವೆಲ್ಟಿ ಹೇಳಿದ್ದಾರೆ. id="toptextpromo">ಈ
ಕನ್ಸೂಲೆಟ್ ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರ, ಕರ್ನಾಟಕ, ಕೇರಳ, ತಮಿಳುನಾಡು, ಪಾಂಡಿಚೇರಿ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ವಹಿವಾಟು ಉಸ್ತುವಾರಿ ನೋಡಿಕೊಳ್ಳಲಿದೆ. ಮುಂದಿನ ವರ್ಷ ಈ ಕಚೇರಿ ಆರಂಭವಾಗುವ ನಿರೀಕ್ಷೆಯಿದೆ. ಅಲ್ಲಿವರೆಗೆ ಈ ಎಲ್ಲಾ ರಾಜ್ಯಗಳಿಗೆ ಮುಂಬೈ ಕೇಂದ್ರದಿಂದಲೇ ಸ್ವಿಜರ್ ಲ್ಯಾಂಡ್ ಸೇವೆ ನೀಡಲಿದೆ. id='are-slot-1' class='oiad oi-axt oiadv'> id='top-searched-articles'>ಕಪ್ಪು
ಹಣ:
ಸ್ವಿಸ್
ಬ್ಯಾಂಕ್
ನಲ್ಲಿರುವ
ಭಾರತೀಯರ
ಕಪ್ಪು
ಹಣದ
ವಿಷಯವು
ಭಾರತ
ಮತ್ತು
ಸ್ವಿಜರ್
ಲ್ಯಾಂಡ್
ಸಹಭಾಗಿತ್ವಕ್ಕೆ
ತೊಂದರೆಯಾಗದು
ಎಂದು
ಪಿಲಿಪ್
ವೆಲ್ಟಿ
ಹೇಳಿದ್ದಾರೆ.
ಕ್ರಿಮಿನಲ್
ಹಣ
ಅಥವಾ
ಕ್ರಿಮಿನಲ್
ಗಳನ್ನು
ರಕ್ಷಿಸಲು
ಬ್ಯಾಂಕಿನ
ರಹಸ್ಯ
ಕಾನೂನಿನಲ್ಲಿ
ಅವಕಾಶವಿಲ್ಲ.
ಭಾರತ
ಸೂಕ್ತ
ದಾಖಲೆ
ಅಥವಾ
ವಿನಂತಿ
ಸಲ್ಲಿಸಿದರೆ
ಕಪ್ಪು
ಹಣದ
ಮಾಹಿತಿ
ಪಡೆಯಬಹುದೆಂದು
ಅವರು
ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications