2ಜಿ ಸ್ಪೆಕ್ಟ್ರಂ ಶಾರುಕ್ ಖಾನ್ ಕೂಡಾ ಭಾಗಿ ?

ಕರೀಂ ಮೊರಾನಿ ಮಗಳು ಝುಯಾ ಜೊತೆ ಶಾರೂಖ್ ತನ್ನ ಮಹತ್ವಾಕಾಂಕ್ಷೆಯ ರಾ1 ಚಿತ್ರ ನಿರ್ಮಿಸುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ಬಜೆಟ್ ನ ಈ ಚಿತ್ರಕ್ಕೆ 2ಜಿ ಸ್ಪೆಕ್ಟ್ರಂ ಹಗರಣದಿಂದ ಬಂದ ದುಡ್ಡನ್ನು ಸುರಿಯಲಾಗಿದೆ ಎನ್ನುವುದು ಶಾರೂಖ್ ವಿರುದ್ದ ಕೇಳಿ ಬರುತ್ತಿರುವ ಆರೋಪ.
ಡಿಬಿ ರಿಯಾಲಿಟಿ ಮತ್ತು ಕಲೈಂಜರ್ ಟಿವಿಗೆ 200 ಕೋಟಿ ರೂಪಾಯಿ ಸಂದಾಯವಾಗಿತ್ತು. ಇದಕ್ಕಾಗಿ ಕರೀಂ ಮೊರಾನಿ ಆರು ಕೋಟಿ ರೂಪಾಯಿಗಳನ್ನು ಸಿನಿ ಫಿಲಂ ಸೊಸೈಟಿ ಹೆಸರಿನಲ್ಲಿ ಪಡೆದಿದ್ದರು. ಈ ಹಣವನ್ನೇ ಚಿತ್ರಕ್ಕೆ ವ್ಯಯಿಸಲಾಗಿದೆ ಎನ್ನುವುದು ಈಗ ಕೇಳಿ ಬರುತ್ತಿರುವ ಆರೋಪ. ಅನುಭವ್ ಸಿನ್ಹಾ ನಿರ್ದೇಶನದ ಶಾರುಕ್, ಕರೀನಾ, ಅರ್ಜುನ್ ರಾಂಪಾಲ್ ಮುಖ್ಯ ಭೂಮಿಕೆಯಲ್ಲಿರುವ ರಾ1 ಚಿತ್ರ ದೀಪಾವಳಿ ಸಮಯದಲ್ಲಿ (ಅಕ್ಟೋಬರ್ ಅಂತ್ಯಕ್ಕೆ) ಬಿಡುಗಡೆಯಾಗುವ ಸಾಧ್ಯತೆಯಿದೆ.
ಈ ಆರೋಪವನ್ನು ಸಾರಾಸಗಾಟವಾಗಿ ತಳ್ಳಿ ಹಾಕಿರುವ ಶಾರುಕ್, ಈ ಆರೋಪ ಆಧಾರರಹಿತ, ನಾನು ಕೊಲ್ಕತ್ತಾ ನೈಟ್ ರೈಡರ್ಸ್ ಮಾಲೀಕ. ನನಗೂ ಮೊರಾನಿಗೂ ಚಿತ್ರ ನಿರ್ಮಾಣ ಸಂಬಂಧ ಸ್ನೇಹವಿದೆಯೇ ಹೊರತು 2ಜಿ ಸ್ಪೆಕ್ಟ್ರಂಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನೊಂದು ಮೂಲಗಳ ಪ್ರಕಾರ, ಇತ್ತೀಚಿಗೆ ಮುಕ್ತಾಯಗೊಂಡ ಐಪಿಎಲ್ ಪಂದ್ಯಾವಳಿ ಆಟಗಾರರ ಬಿಡ್ ಗೆ ಕೆಕೆಆರ್ ಮಾಲೀಕ ಶಾರುಕ್ 2ಜಿ ಸ್ಪೆಕ್ಟ್ರಂ ಹಗರಣದ ದುಡ್ಡನ್ನೇ ಬಳಸಿ ಕೊಂಡಿದ್ದಾರೆನ್ನುವುದು ಬಾಲಿವುಡ್ ನಲ್ಲಿ ಈಗ ಎದ್ದಿರುವ ಗುಸುಗುಸು. ದಿನಕ್ಕೊಂದು ರೀತಿಯಲ್ಲಿ ತಿರುವು ಪಡೆಯುತ್ತಿರುವ ಸ್ಪೆಕ್ಟ್ರಂ ಹಗರಣ ಶಾರುಕ್ ಕೊರಳಿಗೂ ಸುತ್ತಿಕೊಂಡರೆ ಆಶ್ಚಯವಿಲ್ಲ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications