ಮೈದುಂಬಿದೆ ಜೀವನಾಡಿ: ಕನ್ನಂಬಾಡಿಗೆ ನೀರೋ ನೀರು

KRS
ಮಂಡ್ಯ, ಜೂನ್ 14: ತಲಕಾವೇರಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದು, ಜೀವನಾಡಿ ಕನ್ನಂಬಾಡಿಗೆ 56,031 ಕ್ಯೂಸೆಕ್‌ ನೀರು ಹರಿದುಬರುತ್ತಿದೆ. ಕಾವೇರಿ ವಿಚಾರದಲ್ಲಿ ಜಗಳಗಂಟಿ ಎಂದೇ ಕುಖ್ಯಾತಿ ಪಡೆದಿರುವ ತಮಿಳುನಾಡು ಮುಖ್ಯಮಂತ್ರಿ ಜಯರಾಂ ಜಯಲಲಿತಾ ನಿನ್ನೆಯಷ್ಟೇ ಪ್ರಧಾನಿಯನ್ನು ಭೇಟಿ ಮಾಡಿದ್ದಾಗ ಕಾವೇರಿ ನೀರಿಗಾಗಿ ಖ್ಯಾತೆ ತೆಗೆದಿದ್ದಾರೆ. ಆದರೆ ಕನ್ನಂಬಾಡಿಯಲ್ಲಿ ಸಾಕಷ್ಟು ನೀರಿರುವುದರಿಂದ ಸದ್ಯಕ್ಕೆ ಯಡಿಯೂರಪ್ಪ ನಿರಾಳತೆ ಅನುಭವಿಸಬಹುದು.

124.80 ಅಡಿ ಎತ್ತರದ ಕೃಷ್ಣರಾಜಸಾಗರ ಜಲಾಶಯದಲ್ಲಿ ಜೂನ್ 14 ರಂದು ನೀರಿನ ಮಟ್ಟ 95.60 ಅಡಿ ತಲುಪಿದೆ. ಒಳಹರಿವು ಹೆಚ್ಚಿರುವ ಕಾರಣ ಬುಧವಾರ ಬೆಳಗಿನ ವೇಳೆಗೆ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಲಿದೆ. ಕೆಆರ್ಎಸ್ ಅಣೆಕಟ್ಟೆಯಿಂದ 640 ಕ್ಯೂಸೆಕ್‌ ನೀರನ್ನು ಹೊರಬಿಡಲಾಗಿದೆ.

2009ರಲ್ಲಿ ಇದೇ ವೇಳೆಗೆ ಕೇವಲ 71.8 ಅಡಿಗಳಷ್ಟಿದ್ದ ನೀರು, ಕಳೆದ ವರ್ಷ ಅಂದರೆ 2010ರಲ್ಲಿ ಕನ್ನಂಬಾಡಿ ಕಟ್ಟೆಯಲ್ಲಿ 79.10 ಅಡಿಗಳಷ್ಟು ನೀರು ಮಾತ್ರ ಸಂಗ್ರಹವಾಗಿತ್ತು. ಕನ್ನಂಬಾಡಿಯಲ್ಲಿ 80 ಅಡಿ ನೀರು ಇರಲೇಬೇಕು. ಇಲ್ಲವಾದಲ್ಲಿ ಮುಖ್ಯ ನಾಲೆಗಳಿಗೆ ನೀರು ಬಿಡುಗಡೆ ಸಾಧ್ಯವಿಲ್ಲ ಎನ್ನಲಾಗಿದೆ. ಸಾಮಾನ್ಯವಾಗಿ ಕೆಆರ್ಎಸ್ ಅಣೆಕಟ್ಟೆ ತುಂಬುವುದು ಜುಲೈ, ಆಗಸ್ಟ್‌ ವೇಳೆಗೆ. ಕೆಲವು ಸಂದರ್ಭದಲ್ಲಿ ಅಕ್ಟೋಬರ್‌, ಅಂದರೆ ದಸರೆ ಸಂದರ್ಭದಲ್ಲೂ ತುಂಬಿದ ನಿದರ್ಶನಗಳಿವೆ. ಕಳೆದ ಏಳೆಂಟು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬೇಗನೇ ತುಂಬುವ ವಿಶ್ವಾಸ ಮೂಡಿಸಿದೆ.

ಪ್ರಸಕ್ತ ಮುಂಗಾರು ಉತ್ತಮವಾಗಿದ್ದು, ಜೀವನಾಡಿ ಕಾವೇರಿ ಶೀಘ್ರವೇ ತುಂಬುವ ಲಕ್ಷಣಗಳಿವೆ. ಜಿಲ್ಲೆಯಲ್ಲಿ ಈಗ ಹಲವೆಡೆ ಬಿತ್ತನೆ ಕಾರ್ಯ ಆರಂಭವಾಗಿದೆ. ಜಿಲ್ಲೆಯಲ್ಲಿ ನಿತ್ಯ ಮೋಡ ಕವಿದ ವಾತಾವರಣವಿದ್ದು, ಬಹುತೇಕ ಆಗಾಗ ತುಂತುರು ಮಳೆಯಾಗುತ್ತಿದೆ. ಇದು ಬೇಸಿಗೆಯ ಭತ್ತ ಹಾಗೂ ರಾಗಿ ಕೊಯ್ಲು ಹಾಗೂ ಒಕ್ಕಣೆ ಕಾರ್ಯಕ್ಕೆ ತೀವ್ರ ಅಡ್ಡಿಯಾಗುತ್ತಿದೆ. ಆದರೆ, ನಿರೀಕ್ಷೆ ಮುನ್ನವೇ ಕೆಆರ್ಎಸ್ ಅಣೆಕಟ್ಟೆ ತುಂಬುತ್ತಿರುವುದು ಜಿಲ್ಲೆಯ ಜನತೆಗೆ ಹರುಷ ತಂದಿದೆ.

ಆದರೆ, ಮಂಡ್ಯದವರೇ ಆದ ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಂತೂ ಕಟ್ಟೆ ತುಂಬದೆ ಅವರು ಕನ್ನಂಬಾಡಿ ಕಟ್ಟೆಗೆ ಬಾಗಿನ ಅರ್ಪಿಸಲು ಸಾಧ್ಯವಾಗಲೇ ಇಲ್ಲ. ಧರ್ಮಸಿಂಗ್‌, ಕುಮಾರಸ್ವಾಮಿ ಅವಧಿಯಲ್ಲಿ ಕಾವೇರಮ್ಮ ಕೃಪೆ ತೋರಿದ್ದಳು. ಯಡಿಯೂರಪ್ಪ ಅವಧಿಯಲ್ಲಿಯೂ ಹಾಗೇ ಆಗುತ್ತಿದೆ. ಅತ್ತ, ತಮಿಳುನಾಡಿನಲ್ಲಿ ಕರುಣಾನಿಧಿ ಅಧಿಕಾರದಲ್ಲಿದ್ದ ಕಾರಣ ಕಾವೇರಿ ಕದನ ಕಾವೇರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+