ತಮಿಳುಪರ ಆರ್ಚ್ ಬಿಷಪ್ ವಿರುದ್ಧ ಕ್ರೈಸ್ತ ಕನ್ನಡಿಗರ ಕಿಡಿ

Arch Bishop Barnard Moras
ಬೆಂಗಳೂರು, ಜೂ. 15 : ಕನ್ನಡ ಮಾತನಾಡುವ ಕ್ರೈಸ್ತರ ಆಶೋತ್ತರಗಳನ್ನು ಕಡೆಗಣಿಸಲಾಗುತ್ತಿದೆ ಮತ್ತು ಅವರ ಪರವಾಗಿ ನಿಲ್ಲುತ್ತಿಲ್ಲ ಎಂದು ಆರೋಪಿಸಿ ಅಖಿಲ ಕರ್ನಾಟಕ ಕ್ಯಾಥೊಲಿಕ್ ಕ್ರಿಶ್ಚಿಯನ್ ಕನ್ನಡ ಸಂಘದ ಸದಸ್ಯರು ಖ್ಯಾತ ವಿಮರ್ಶಕ ಸಾಶಿ ಮರುಳಯ್ಯ ಅವರ ನೇತೃತ್ವದಲ್ಲಿ ಆರ್ಚ್ ಬಿಷಪ್ ಬರ್ನಾರ್ಡ್ ಮೋರಾಸ್ ಅವರ ನಿವಾಸದೆದಿರು ಪ್ರತಿಭಟನೆ ನಡೆಸಿದರು.

ಮಿಲ್ಲರ್ಸ್ ರಸ್ತೆಯಲ್ಲಿರುವ ಮೋರಾಸ್ ಅವರ ಮನೆಯೆದಿರು ಜಮಾಯಿಸಿದ ಕ್ಯಾಥೊಲಿಕ್ ಕನ್ನಡಿಗರು, ಆರ್ಚ್ ಬಿಷಪ್ ಅವರು ಕೊಂಕಣಿ ಮತ್ತು ತಮಿಳು ಮಾತನಾಡುವ ಕ್ರೈಸ್ತರನ್ನು ಮಾತ್ರ ಓಲೈಸುತ್ತಿದ್ದಾರೆ. ಕನ್ನಡಿಗರಿಗೆ ಕವಡೆ ಕಾಸಿನ ಕಿಮ್ಮತ್ತು ಕೂಡ ನೀಡುತ್ತಿಲ್ಲ ಎಂದು ಆರೋಪಿಸಿದರು.

ಜೆಸಿ ರಸ್ತೆಯಲ್ಲಿರುವ ಸೇಂಟ್ ತೆರೆಸಾ ಚರ್ಚ್ ನಲ್ಲಿ ಕನ್ನಡಪರ ಪಾದ್ರಿಯನ್ನೇ ನೇಮಿಸುವ ಪರಿಪಾಠವನ್ನು 1948ರಿಂದ ಜಾರಿಮಾಡಿಕೊಂಡು ಬರಲಾಗಿದೆ. ಆದರೆ, ಈ ಬಾರಿ ಮಾತ್ರ ತಮಿಳುಪರ ಇರುವಂಥ ಪಾದ್ರಿಯನ್ನು ನೇಮಿಸಿರುವುದು ನಿಜಕ್ಕೂ ದುರ್ದೈವ ಎಂದು ಅವರು ಕಿಡಿಕಾರಿದರು.

ಕನ್ನಡ ಭಾಷಿಗರಿಗಾಗಿ ಹೋರಾಟ ಮಾಡುತ್ತಿರುವ ಫ್ರಾನ್ಸಿಸ್ ಥಾಮಸ್ ಅವರನ್ನು ಕನಕಪುರ ರಸ್ತೆಯಲ್ಲಿರುವ ಸಣ್ಣ ಚರ್ಚ್ ಕ್ರಿಸ್ತ ಕರುಣಾಲಯಕ್ಕೆ ಸ್ಥಳಾಂತರಿಸಲಾಗಿದೆ. ಹಾಗೆಯೆ, ಕನ್ನಡಕ್ಕಾಗಿ ಹೋರಾಡುತ್ತಿರುವವರ ಮೇಲೆ ದೌರ್ಜನ್ಯವೆಸಲಾಗುತ್ತಿದೆ. ಇದು ಕೂಡಲೆ ನಿಲ್ಲಬೇಕು ಎಂದು ಅವರು ಆಗ್ರಹಿಸಿದರು.

ಎಲ್ಲ ಚರ್ಚುಗಳಲ್ಲಿ ಕನ್ನಡದಲ್ಲಿಯೇ ಪ್ರಾರ್ಥನೆ ಸಲ್ಲಿಸುವಂತಾಗಬೇಕು ಮತ್ತು ಮಕ್ಕಳಿಗೆ ವಿದ್ಯಾರ್ಜನೆ ಮಾಡಲೆಂದು ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆಯಬೇಕು. ಕರ್ನಾಟಕದಲ್ಲಿಯೇ ಕನ್ನಡಿಗರಿಗೆ ಅವಕಾಶಗಳನ್ನು ನೀಡದಿದ್ದರೆ ಹೇಗೆ ಎಂದು ಸಾಶಿ ಮರುಳಯ್ಯ ಖಾರವಾಗಿ ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+