ಬಿಜಾಪುರ: ಹಾಡಹಗಲೇ 5 ಮಹಿಳೆಯರ ಮೇಲೆ ಅತ್ಯಾಚಾರ
ಬಿಜಾಪುರ,
ಜೂನ್ 15: ಮುದ್ದೇಬಿಹಾಳದ ಹಂದ್ರಾಳದಲ್ಲಿ ಐವರು ಮಹಿಳೆಯರ ಮೇಲೆ ಅವರ ದಾಯಾದಿಗಳು ಹಾಡಹಗಲೇ ಅತ್ಯಾಚಾರವೆಸಗಿ, ಅವರನ್ನು ಮನೆಯ ಛಾವಣಿ ಮೇಲೆ ಕಟ್ಟಿಹಾಕಿ ಅಟ್ಟಹಾಸ ಮೆರೆದಿದ್ದಾರೆ. ಬುಧವಾರ ಬೆಳಗ್ಗೆ ಮನೆ ಕಟ್ಟೋ ವಿಚಾರದಲ್ಲಿ ದಾಯಾದಿಗಳು ಇಂತಹ ಮನೆಹಾಳು ಕೆಲಸ ಮಾಡಿದ್ದಾರೆ ಎಂದು ಟಿವಿ ವಾಹಿನಿಗಳು ಸುದ್ದಿ ಬಿತ್ತರಿಸಿವೆ. id="toptextpromo">ಮಲ್ಲಮ್ಮ
ಬಿರಾದಾರ್ ಹೆಸರಿನ ಇಬ್ಬರು, ಶಾಂತಮ್ಮಬಿರಾದಾರ್, ದೇವಮ್ಮ ಬಿರಾದಾರ್ ಮತ್ತು ಸುಮಿತ್ರಾ ಬಿರಾದಾರ್ ಅತ್ಯಾಚಾರಕ್ಕೀಡಾದ ಮಹಿಳೆಯರು. ಇವರ ದಾಯಾದಿಗಳಾದ ಈರಣ್ಣ, ಶಂಕರಗೌಡ, ಬಸಂತಕುಮಾರ್, ಶರಣಪ್ಪ ಎಂಬುವವವರು ಇಡೀ ರಾಜ್ಯವೇ ತಲೆ ತಗ್ಗಿಸುವಂತಹ ಈ ಹೇಯ ಕೃತ್ಯವನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ. id='are-slot-1' class='oiad oi-axt oiadv'> id='top-searched-articles'>ಅತ್ಯಾಚಾರಕ್ಕೊಳಗಾದ
ಮಹಿಳೆಯರ ಮಕ್ಕಳು ತಾಳಿಕೋಟೆ ಪೊಲೀಸರಿಗೆ ದೂರು ನೀಡಿದಾಗ ವಿಷಯ ಬೆಳಕಿಗೆ ಬಂದಿದೆ. ಆರೋಪಿಗಳನ್ನೆಲ್ಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಮೀನಮೇಷ ಎಣಿಸಿದ್ದಾರೆ ಎನ್ನಲಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಮುದ್ದೇಬಿಹಾಳ ಪೊಲೀಸ್ ವರಿಷ್ಠಾಧಿಕಾರಿ ರಾಜಪ್ಪ ಸ್ಥಳಕ್ಕೆ ತೆರಳಿದ್ದಾರೆ.











Click it and Unblock the Notifications