ಇಷ್ಟಕ್ಕೂ ಬಾಬಾಗೆ ಹೆಲಿಕಾಪ್ಟರ್ ನೀಡಿದವರು ಯಾರು?

ಅವರ ಹಲವಾರು ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಸರ್ಕಾರ ಈ ಹಿಂದೆಯೇ ಹೇಳಿದೆ. ಹೀಗಾಗಿ ಪುನಃ ಮಾತನಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಮದೇವ್ ಅವರು ದೇಣಿಗೆ ಸ್ವೀಕರಿಸುವ ಮೂಲಕ ರಾಷ್ಟ್ರದಲ್ಲಿ ಕಾಳ ಧನಸ ಪರಿವರ್ತನೆಗೆ ನೆರವಾಗುತ್ತಿದ್ದಾರೆ.
ಅಷ್ಟೇ ಅಲ್ಲ, ತಮಗೆ ಹೆಲಿಕಾಪ್ಟರನ್ನು ಗೋಪ್ಯವಾಗಿ ಕೊಡುಗೆ ನೀಡಿದವರು ಯಾರು ಎಂಬುದನ್ನು ಅವರು ಬಹಿರಂಗಗೊಳಿಸಬೇಕು ಎಂದು ಸಿಂಗ್ ಸವಾಲು ಹಾಕಿದ್ದಾರೆ. ರಹಸ್ಯವಾಗಿ ನೀಡಲಾಗುವ ಕಪ್ಪುಹಣವನ್ನು ಪರಿವರ್ತಿಸಲು ನೆರವಾಗುವ ಮೂಲಕ ಬೊಕ್ಕಸಕ್ಕೆ ತೆರಿಗೆ ವಂಚನೆ ಆಗುತ್ತಿರುವುದಕ್ಕೂ ಅವರು ಸಹಕರಿಸುತ್ತಿದ್ದಾರೆ. ಇದರಿಂದ ಸ್ವತಃ ರಾಮದೇವ್ ಕೂಡ ಅಪಾರ ಸಂಪತ್ತನ್ನು ಸಂಗ್ರಹಿಸುತ್ತಿದ್ದಾರೆ ಎಂದು ಗಂಭೀರ ಆಪಾದನೆ ಮಾಡಿದರು.
ಪ್ರಧಾನಮಂತ್ರಿ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಲೋಕಪಾಲ ವ್ಯಾಪ್ತಿಯಡಿ ತರಬೇಕು ಎಂದಿರುವ ದಿಗ್ವಿಜಯ ಸಿಂಗ್, ನಾನು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಸಿಎಂ ಹುದ್ದೆಯನ್ನು ಲೋಕಾಯುಕ್ತ ವ್ಯಾಪ್ತಿಯಡಿಗೆ ತಂದಿದ್ದೆ' ಎಂದಿದ್ದಾರೆ












Click it and Unblock the Notifications