ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಮತಾಂತರ, ಪಾದ್ರಿ ಸೇರಿ ಮೂವರು ಪೊಲೀಸ್ ವಶ

|
Google Oneindia Kannada News

ಬೆಂಗಳೂರು ಜೂ 13: ತಮಿಳುನಾಡು ಮತ್ತು ರಾಜ್ಯದ ವಿವಿಧೆಡೆಯಿಂದ ಆಗಾಗ ಅಮಾಯಕ ಬಡ ಜನರನ್ನು ಕರೆತಂದು ಆಮಿಷಗಳನ್ನೊಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ನಡೆಸಲಾಗುತ್ತಿದೆ ಎನ್ನುವ ಆರೋಪದ ಬೆನ್ನಲ್ಲೇ ನಗರದ ಎಚ್ ಬಿಆರ್ ಬಡಾವಣೆ ನಾಗವರದಲ್ಲಿರುವ ಚರ್ಚ್ ನ ಪಾದ್ರಿ ಮತ್ತು ಇನ್ನಿಬ್ಬರನ್ನು ಹೆಣ್ಣೂರು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಪಾದ್ರಿ ಹೆನ್ರಿ ಬ್ಯಾಪ್ಟಿಸ್ಟ್ ಮತ್ತು ಸಹಚರರ ವಿರುದ್ದ ದೂರು ದಾಖಲಿಸಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಪೊಲೀಸರು ದಾಳಿ ನಡೆಸಿದ ಸಮಯದಲ್ಲಿ ತಮಿಳುನಾಡು ಕೊಯಂಬುತ್ತೂರಿನಿಂದ ಕರೆತರಲಾಗಿದ್ದ 70 -80 ರೋಗಿಗಳು ಪ್ರಾರ್ಥನೆಯಲ್ಲಿ ತೊಡಗಿದ್ದರು. ಸೆಂಟ್ ಮೇರಿ ಹಬ್ಬದ ಪ್ರಯುಕ್ತ ರೋಗಿಗಳಿಗೆ ಮತ್ತು ಬಡವರನ್ನು ಕರೆತಂದು ಉಪಚರಿಸಲಾಗುತ್ತಿದೆ ಎಂದು ಪಾದ್ರಿ ಸ್ಪಷ್ಟನೆ ನೀಡಿದ್ದಾರೆ.

ಮತಾಂತರ ಆರೋಪದ ಹಿನ್ನಲೆಯಲ್ಲಿ ಚರ್ಚ್ ಬಳಿ ಭಾರೀ ಪ್ರಮಾಣದಲ್ಲಿ ಸಾರ್ವಜನಿಕರು ಗುಂಪುಗೂಡಿದ್ದರು. ಗುಂಪುಗಳೆರಡರ ನಡುವೆ ಮಾತಿನ ಚಕಮಕಿ ಉಂಟಾಗಿ ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೋಲೀಸರ ಸಕಾಲದಲ್ಲಿ ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ಆದರೂ ನಾಗವರ ಸುತ್ತಮುತ್ತ ಬಿಗಿ ಪೋಲಿಸ್ ಬಂದೋಬಸ್ ವ್ಯವಸ್ಥೆ ಮಾಡಲಾಗಿದೆ.

ಚರ್ಚ್ ಪಾದ್ರಿ ಈ ಹಿಂದೆ ಹಲವು ಬಾರಿ ಬಡಜನರಿಗೆ ಆಮಿಷವೊಡ್ಡಿ ಮತಾಂತರದಲ್ಲಿ ತೊಡಗಿದ್ದು ಹಲವು ಬಾರಿ ಪೊಲೀಸರು ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಆದರೂ ಇವರು ಮತ್ತು ಇವರ ಸಹಚರರು ಮತಾಂತರ ಚಟುವಟಿಕೆ ನಿಲ್ಲಿಸಿರಲಿಲ್ಲ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ.

English summary
Hennur police(Bangalore) arrested 3 men for their alleged involvement in religious conversion. The men, arrested on Sunday night, were identified as Robin, Mani and Ramamurthy. The 3 men will be produced before court on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X