ಮೈಸೂರು: ಕಾಡಾನೆ ದಾಳಿಗೆ ಒಬ್ಬ ಬಲಿ

ಅರವಳಿಕೆ ಡೋಸ್ ಗಳಿಗೆ ಬಗ್ಗದ ಆನೆಗಳನ್ನು ಹಿಡಿದು ಹತೋಟಿಗೆ ತರಲು ಕೊನೆ ಪ್ರಯತ್ನ ಎಂಬಂತೆ ಪಳಗಿದ ಆನೆಗಳನ್ನು ಬಳಸಲು ಅರಣ್ಯ ಇಲಾಖೆ ಸಿಬ್ಬಂದಿ ಯೋಚಿಸಿದ್ದಾರೆ. ನಾಗರಹೊಳೆಯಿಂದ ಅರ್ಜುನ, ತಿತಿಮತಿ ಅರಣ್ಯದಿಂದ ಅಭಿಮನ್ಯು, ಕೆ ಗುಡಿಯಿಂದ ಗಜೇಂದ್ರ ಶ್ರೀರಾಮ ಆನೆಗಳನ್ನು ಕರೆಸಿಕೊಳ್ಳಲಾಗಿದೆ. ಮನೆಯಿಂದ ಹೊರಕ್ಕೆ ಬರದಂತೆ ಸಾರ್ವಜನಿಕ ಸೂಚಿಸಲಾಗಿದ್ದು, ಅನೇಕ ಕಡೆ ಆನೆ ನೋಡಲು ಸೇರಿದ್ದ ಜನಜಂಗುಳಿಯನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಆನೆ ನಡೆದಿದ್ದೇ ದಾರಿ: ಇಂದು ಮುಂಜಾನೆ ಸುಮಾರು 5 ಗಂಟೆ ವೇಳೆಗೆ ಬಂಬೂ ಬಜಾರ್ ಬಳಿ ಕಾಣಿಸಿಕೊಂಡ ಒಂದು ಆನೆ ನಂತರ ಸರಸ್ವತಿ ಪುರಂ, ದೋಭಿಘಾಟ್ ಮುಂತಾದ ಕಡೆ ತನ್ನ ದಾಂದಲೆ ನಡೆಸಿದೆ. ಇನ್ನೊಂದು ಆನೆ ನಗರದ ಹೊರವಲಯದ ನಾಯ್ಡು ಫಾರ್ಮ್ ಹೌಸ್ ನಲ್ಲಿ ಬೀಡುಬಿಟ್ಟಿದೆ.
ಸೋವು ನೋವು : ಮನೆ ಹತ್ತಿರ ಆನೆ ಬಂದಿದೆ ಎಂದು ಖುಷಿಯಿಂದ ನೋಡಲು ಓಡೋಡಿ ಬಂದ ರೇಣುಕಾಪ್ರಸಾದ್(55) ಎಂಬ ವ್ಯಕ್ತಿಯನ್ನು ಕಾಡಾನೆ ಭೀಕರವಾಗಿ ಕೊಂದಿದೆ. ಇನ್ನೊಂದು ಆನೆ ಸಯ್ಯಾಜಿರಾವ್ ರಸ್ತೆ ಬಳಿ ನಿಂತಿದ್ದ ಹಸುವಿನ ಮೇಲೆ ತನ್ನ ಬಲ ಪ್ರಯೋಗ ಮಾಡಿ ಮಾರಾಣಾಂತಿಕವಾಗಿ ಹಲ್ಲೆಗೊಳಿಸಿದೆ.












Click it and Unblock the Notifications