ತಮಿಳುನಾಡಿನಲ್ಲಿ ಬಸ್ ಉರಿದು ಬೂದಿ, 23 ಸಾವು
ವೆಲ್ಲೂರು,
ಜೂ 8: ಚೆನ್ನೈ ನಿಂದ ಪೊಲಾಚಿ ಕಡೆ ತೆರಳುತ್ತಿದ್ದ ಖಾಸಗಿ ಬಸ್ ಎದುರುಗಡೆಯಿಂದ ಬರುತ್ತಿದ್ದ ಇನ್ನೊಂದು ವಾಹನಕ್ಕೆ ದಾರಿ ಬಿಡಲು ಹೋಗಿ ರಸ್ತೆ ಮೇಲೆ ಕಟ್ಟಿದ್ದ ಮೋರಿಗೆ ಅಪ್ಪಳಿಸಿದೆ. 15 ಅಡಿ ಕೆಳಗೆ ಬಿದ್ದ ತಕ್ಷಣ ಬಸ್ಸಿಗೆ ಬೆಂಕಿ ಹತ್ತಿಕೊಂಡು 23 ಜನ ಪ್ರಯಾಣಿಕರು ಸುಟ್ಟು ಕರಕಲಾದ ಘಟನೆ ಮಂಗಳವಾರ (ಜೂ 7) ಮಧ್ಯ ರಾತ್ರಿ ಸಂಭವಿಸಿದೆ. id="toptextpromo">ಬೆಂಗಳೂರು
ಚೆನ್ನೈ ರಾಷ್ಟ್ರೀಯ ಹೆದ್ದಾರಿ ಕಾವೇರಿಪಕ್ಕಂ ಬಳಿಯ ಆವಲೂರಿನಿಂದ ಈ ಘಟನೆ ವರದಿಯಾಗಿದೆ. ಈ ಸ್ಥಳ ವೆಲ್ಲೂರು ನಗರದಿಂದ 40 ಕಿ.ಮೀ ದೂರದಲ್ಲಿದೆ. ಬಸ್ಸಿನ ಡ್ರೈವರ್ ಕಿಟಕಿಯಿಂದ ಹಾರಿ ಘಟನಾ ಸ್ಥಳದಿಂದ ತಪ್ಪಿಸಿಕೊಂಡು ನಂತರ ಪೊಲೀಸರಿಗೆ ಶರಣಾಗಿದ್ದಾನೆ. ಒಬ್ಬ ಪ್ರಯಾಣಿಕ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಗುರುತಿಸಲಾಗದಷ್ಟು
ದೇಹಗಳು ಸುಟ್ಟು ಕರಕಲಾಗಿದೆ ಎಂದು ಕಾಂಚೀಪುರಂ ಪೋಲೀಸ್ ಸುಪರಿಂಡೆಂಟ್ ಎಸ್ ಮನೋಹರನ್ ತಿಳಿಸಿದ್ದಾರೆ. ಮೃತರಲ್ಲಿ ಐವರು ಮಹಿಳೆಯರು ಇಬ್ಬರು ಮಕ್ಕಳು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications