ಮಾರನ್ ಕಿರುಕುಳಕ್ಕೆ ಏರ್ಸೆಲ್ ಮಾರಿಬಿಟ್ಟೆ: ಶಿವಶಂಕರನ್

"ಏರ್ಸೆಲ್ ಕಂಪನಿಯನ್ನು ಟಿ. ಆನಂದಕೃಷ್ಣನ್ ಗೆ ಮಾರಾಟ ಮಾಡುವಂತೆ ಒತ್ತಾಯಿಸುತ್ತಿದ್ದರು. ಪ್ರತಿಬಾರಿಯು ಮೊಬೈಲ್ ನೆಟ್ ವರ್ಕ್ ಪರವಾನಿಗೆ ಅಪ್ಲಿಕೇಷನ್ ತಿರಸ್ಕರಿಸುವ ಮೂಲಕ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಕಿರುಕುಳ ನೀಡಿತ್ತು" ಎಂದು ಏರ್ಸೆಲ್ ಮಾಜಿ ಮಾಲಿಕ ಶಿವಶಂಕರನ್ ಆರೋಪಿಸಿದ್ದಾರೆ.
ಆದರೆ ಬಲವಂತದಿಂದ ಕಂಪನಿಯನ್ನು ಮಾರಾಟ ಮಾಡಿಸಿದ್ದಾರೆ. ನಂತರ ಆನಂದಕೃಷ್ಣನ್ ಏರ್ಸೆಲನ್ನು ಸ್ವಾಧೀನಪಡಿಸಿಕೊಂಡರು. ಆದರೆ ಅವರು ಸ್ವಾಧೀನಪಡಿಸಿಕೊಂಡ ಒಂದೇ ತಿಂಗಳಲ್ಲಿ ಸುಮಾರು 14 ಮೊಬೈಲ್ ನೆಟ್ ವರ್ಕ್ ಪರವಾನಿಗೆಯನ್ನು ನೀಡಲಾಗಿದೆ ಎಂದು ಶಿವಶಂಕರನ್ ಹೇಳಿದ್ದಾರೆ.
ಆನಂದಕೃಷ್ಣನ್ ಕಂಪನಿ ಸನ್ ಟಿವಿಗೆ ಸುಮಾರು 800 ಕೋಟಿ ರು. ಹೂಡಿಕೆ ಮಾಡಿದೆ ಎಂದರು. ಆದರೆ ಇವರ ಆರೋಪವನ್ನು ಶಿವಶಂಕರನ್ ತಳ್ಳಿಹಾಕಿದ್ದಾರೆ. ಶಿವಶಂಕರನ್ ಗೆ ಕಿರುಕುಳ ನೀಡಲು ತನ್ನ ಹುದ್ದೆಯನ್ನು ಬಳಸಿಕೊಂಡಿಲ್ಲ ಮತ್ತು ತಾನು ಸನ್ ಟಿವಿಯಲ್ಲಿ ಯಾವುದೇ ಷೇರನ್ನು ಹೊಂದಿಲ್ಲ ಎಂದು ಮಾರನ್ ಹೇಳಿದ್ದಾರೆ.












Click it and Unblock the Notifications