ಸಿದ್ದರಾಮಯ್ಯ ದುಶ್ಯಾಸನ: ಬಿಜೆಪಿಯವರು ಮಹಾಪಾಪಿಗಳು

Siddaramaiah
ಬೆಂಗಳೂರು, ಜೂನ್ 6: ಅಧಿವೇಶನ ಬಹಿಷ್ಕರಿಸಿರುವ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿಯ ನಾಯಕರಿಗೆ ಪರಸ್ಪರ ದುಶ್ಯಾಸನ ಮತ್ತು ಪಾಪಿಗಳು ಗೋಚರವಾಗಿತ್ತಿದ್ದಾರೆ. ಇಂತಹ ಬೇಜವಾಬ್ದಾರಿ ನಾಯಕರ ಮಧ್ಯೆ ರಾಜ್ಯದ ಜನತೆ ನಲುಗುತ್ತಿದ್ದಾರೆ.

'ವಿಧಾನಸಭೆ ಕಲಾಪವನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಾಮರ್ಥಯವಿಲ್ಲದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸದನದಲ್ಲಿ ದುಶ್ಯಾಸನರಂತೆ ವರ್ತಿಸುತ್ತಿದ್ದಾರೆ' ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಜೆ. ಪುಟ್ಟಸ್ವಾಮಿ ಟೀಕಿಸಿದ್ದಾರೆ.

ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಲಿಲ್ಲ ಎಂಬ ನೆಪವೊಡ್ಡಿ ಇಡೀ ಅಧಿವೇಶನವನ್ನೇ ಬಹಿಷ್ಕರಿಸುವ ಮೂಲಕ ಕಾಂಗ್ರೆಸ್‌ ಪಕ್ಷ ಪಲಾಯನವಾದಿಯಾಗಿದೆ. ಸ್ಪೀಕರ್ ಒಂದು ನಿಯಮದಡಿ ಚರ್ಚೆಗೆ ಅವಕಾಶ ನೀಡಿಲ್ಲ ಎಂದರೆ, ಮತ್ತೂಂದು ನಿಯಮದಡಿ ಅದೇ ವಿಷಯ ಪ್ರಸ್ತಾಪಿಸಲು ಅವಕಾಶವಿದೆ. ಆದರೆ, ಈ ಚಾತುರ್ಯ ಸಿದ್ದರಾಮಯ್ಯ ಅವರಿಗೆ ಇಲ್ಲದಿರುವುದರಿಂದಲೇ ಅವರು ಸದನದಲ್ಲಿ ದುಶ್ಯಾಸನರಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯ ಸ್ಪೀಕರ್ ವಿರುದ್ಧ ಅವಾಚ್ಯ ಪದ ಬಳಕೆ ಮಾಡುತ್ತಿದ್ದಾರೆ. ಕೈ ಬಾಯಿ ಆಡಿಸಿ ಕುಸ್ತಿಗೆ ಬಂದವರಂತೆ ಆಡುತ್ತಾರೆ. ನಿಜವಾಗಿಯೂ ಅವರಿಗೆ ಸಾಮರ್ಥ್ಯವಿದ್ದರೆ ಸದನದಲ್ಲಿ ಪಾಲ್ಗೊಂಡು ತಮ್ಮ ಸಂಸದೀಯಪಟುತ್ವ ಪ್ರದರ್ಶಿಸಲಿ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯಗೆ ಬಿಜೆಪಿಯವರು ಮಹಾಪಾಪಿಗಳಂತೆ: ಕಾನೂನು, ಸಂವಿಧಾನ ಮತ್ತು ಸುಪ್ರೀಂಕೋರ್ಟ್‌ ಬಗ್ಗೆ ಗೌರವ ನೀಡದ ಬಿಜೆಪಿಯವರೇ ಮಹಾಪಾಪಿಗಳು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಚಿವ ಆಚಾರ್ಯರವರಿಗೆ ಪ್ರತಿಕ್ರಿಯಿಸಿದ್ದಾರೆ.

'ಜನಾದೇಶ, ಕಾನೂನು ನ್ಯಾಯಾಲಯದ ತೀರ್ಪುಗಳಿಗೆ ಗೌರವ ಸಲ್ಲಿಸುವುವವರೆಂದರೆ ಕಾಂಗ್ರೆಸಿಗರು ಮಾತ್ರ. ಸಂವಿಧಾನಕ್ಕೆ ಮತ್ತು ಕಾನೂನಿಗೆ ತದ್ವಿರುದ್ದವಾಗಿ ಅಧಿಕಾರದ ದಾಹದಿಂದ ಕನಿಷ್ಟ ಗೌರವವನ್ನು ನೀಡದೇ ನಡೆದುಕೊಳ್ಳುವವರೇ ಬಿಜೆಪಿಯವರು ಎಂದು ತಿ.ನರಸೀಪುರದಲ್ಲಿ ಅವರು ಛೇಡಿಸಿದ್ದಾರೆ.

'ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕ ಶಾಪಗ್ರಸ್ತ ರಾಜ್ಯವಾಯಿತು ಎಂದು ಹೇಳುವ ಮೂಲಕ ಕಾಂಗ್ರೆಸಿಗರು ಪಾಪಿಗಳು ಎಂದು ಹೇಳಿರುವ ಸಚಿವ ಡಾ. ಆಚಾರ್ಯ ಅವರಿಗೆ ತಿರಿಗೇಟು ನೀಡಿದ್ದಾರೆ. ಸಂವಿಧಾನವನ್ನು ಕಾಪಾಡುವ ರಾಜ್ಯಪಾಲರ ಬಗ್ಗೆ ಕೀಳುಮಟ್ಟದ ಮಾತನಾಡಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಎಸ್‌ ಈಶ್ವರಪ್ಪ ಎಂಬುದನ್ನು ಆಚಾರ್ಯ ಮರೆಯಬಾರದು. ಅವರು ಹೇಳಿಕೆ ನೀಡುವಾಗ ಕಾಂಗ್ರೆಸ್‌ ಪಕ್ಷದ ಬಗ್ಗೆ ಅರಿತು ಮಾತನಾಡುವಂತಾಗಲಿ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+