ಮಂಗಳೂರು ಜೈಲು ಮೇಲೆ ದಾಳಿ; ಗಾಂಜಾ ವಗೈರೆ ಪತ್ತೆ

Mangalore jail
ಮಂಗಳೂರು, ಜೂನ್ 2: ಇಲ್ಲಿನ ಉಪ ಕಾರಾಗೃಹಕ್ಕೆ ಹೊರಗಿನಿಂದ ಮಾರಕಾಸ್ತ್ರ ರವಾನೆಯಾಗಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಬುಧವಾರ ದಾಳಿ ನಡೆಸಿ, ಕಾರಾಗೃಹದಲ್ಲಿ ತೀವ್ರ ತಪಾಸಣೆ ನಡೆಸಿದರು.

ಎಸಿಪಿ ರವಿಂದ್ರ ಗಡಾದಿ ಹಾಗೂ ಇನ್‌ಸ್ಪೆಕ್ಟರ್ ವಿನಯ್ ಗಾಂವಕರ್ ನೇತೃತ್ವದಲ್ಲಿ ನಡೆದ ದಾಳಿ ವೇಳೆ ಕಾರಾಗೃಹದಲ್ಲಿ ಷೇವಿಂಗ್ ಬ್ಲೇಡ್, ಕತ್ತರಿ, 40 ಗ್ರಾಂ ಗಾಂಜಾ, ಎರಡು ಮೊಬೈಲ್ ಫೋನ್ ಹಾಗೂ ಚಾರ್ಜರ್, ಲೈಟರ್, ಸೊಳ್ಳೆ ನಿವಾರಕ ಬತ್ತಿ ಮತ್ತು ನೈಲ್ ಕಟ್ಟರ್ ವಶಪಡಿಸಿಕೊಳ್ಳಲಾಗಿದೆ.

ಬಂದರು ಪ್ರದೇಶದಲ್ಲಿ 2008ರಲ್ಲಿ ನಡೆದಿದ್ದ ಹಿಂದೂ ಮುಖಂಡರ ಹತ್ಯೆ ಆರೋಪಿಗಳಾದ, ಇಬ್ಬರು ಯುವಕರ ಮೇಲೆ ದಾಳಿ ನಡೆಸಲು ಜೈಲಿನೊಳಗಿರುವ ಕೆಲವರಿಗೆ ಸುಪಾರಿ ನೀಡಲಾಗಿದೆ. ಅದನ್ನು ಕಾರ್ಯರೂಪಕ್ಕೆ ತರಲು ಕಳೆದ ಶನಿವಾರ ಜೈಲಿನ ಆವರಣದ ಗೋಡೆಯಾಚೆಯಿಂದಲೇ ಚೂರಿ, ಮಚ್ಚು ಸೇರಿದಂತೆ ಮಾರಕಾಸ್ತ್ರ ಒಳಗೆ ಎಸೆಯಲಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಿಢೀರ್ ದಾಳಿ ನಡೆಸಿದರು.

ಜೈಲಿನ ಆವರಣ, ಕೈದಿಗಳ ಸೆಲ್‌ಗಳಲ್ಲಿ ಹುಡುಕಾಟ ನಡೆಸಿದ ಪೊಲೀಸರಿಗೆ ಮಾರಕಾಸ್ತ್ರಗಳು ದೊರೆಯಲಿಲ್ಲ. ಆದರೆ, 3 ಗಂಟೆಗಳ ಸುದೀರ್ಘ ಹುಡುಕಾಟದ ಫಲವಾಗಿ ಜೈಲಿನೊಳಗೆ ಅನಪೇಕ್ಷಿತ ವಸ್ತುಗಳು ಪತ್ತೆಯಾದವು. ವಾರದ ಹಿಂದಷ್ಟೇ ಉಪ ಕಾರಾಗೃಹಕ್ಕೆ ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡಿದ್ದ ಪೊಲೀಸರು, ಮತ್ತೆ ದಾಳಿ ನಡೆಸಿದಾಗಲೂ ಗಾಂಜಾ ಪತ್ತೆಯಾಗಿದ್ದು ವಿಶೇಷ. ಈ ಬಗ್ಗೆ ಜೈಲು ಸಿಬ್ಬಂದಿಯೂ ಅಚ್ಚರಿ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+