ರಾಜೀನಾಮೆ ಕೊಡೋದೇ ಇಲ್ಲ: ಬೋಪಯ್ಯ ಸ್ಪೀಕ್ಸ್
ಬೆಂಗಳೂರು,
ಜೂನ್ 1: ಭಿನ್ನಮತೀಯ ಶಾಸಕರನ್ನು ಅನರ್ಹಗೊಳಿಸಿದ್ದ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದ ಸ್ಪೀಕರ್ ಕೆ.ಜಿ. ಬೋಪಯ್ಯ ಅವರು ತಮ್ಮ ರಾಜೀನಾಮೆ ವಿಚಾರವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. id="toptextpromo">ಜೂನ್
2ರಿಂದ ವಿದಾನಮಂಡಲ ಆಧಿವೇಶನ ಆರಂಭವಾಗುವುದರ ನಿಮಿತ್ತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೋಪಯ್ಯ ಅವರು ತಾವು 16 ಶಾಸಕರನ್ನು ಅನರ್ಹತೆಗೊಳಿಸಿದ್ದರ ಬಗ್ಗೆ ಸುಪ್ರೀಂ ಕೋರ್ಟ್ ಕೇವಲ ತನ್ನ ಅಭಿಪ್ರಾಯವನ್ನು ತಿಳಿಸಿದೆಯಷ್ಟೆ. ನಾನು ರಾಜೀನಾಮೆ ನೀಡಬೇಕು ಎಂದಾಗಲಿ ಅಥವಾ ನನ್ನನ್ನು ವಜಾಗೊಳಿಸಬೇಕು ಎಂದೇನೂ ಕೋರ್ಟ್ ಹೇಳಿಲ್ಲ' ಎಂದು ಸ್ಪಷ್ಟಪಡಿಸಿದರು. id='are-slot-1' class='oiad oi-axt oiadv'> id='top-searched-articles'>ಇದೇ
ವೇಳೆ, 'ಪ್ರತಿಪಕ್ಷಗಳು ನನ್ನ ರಾಜೀನಾಮೆಗೆ ಪಟ್ಟುಹಿಡಿದಿರುವುದು ಸರಿಯಲ್ಲ. ಆದ್ದರಿಂದ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಎಲ್ಲ ಪಕ್ಷದವರಿಗೂ ಮನವಿ ಮಾಡುವೆ' ಎಂದು ಹೇಳಿದರು. ಈ ಮಧ್ಯೆ, ಪ್ರಜಾಪ್ರಭುತ್ವ ವ್ಯವಸ್ಥೆ ಅಳವಡಿಸಿಕೊಂಡ ಯಾವುದೇ ದೇಶದ ಸರ್ವೋಚ್ಚ ನ್ಯಾಯಾಲಯ ಛೀಮಾರಿ ಹಾಕಿದ ನಿದರ್ಶನಗಳಿಲ್ಲ. ಅಂತಹುದರಲ್ಲಿ 'ನಮ್ಮ' ಸ್ಪೀಕರ್ ಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿರುವುದು ವಿಶ್ವದಲ್ಲೇ ಪ್ರಥಮ ಎಂದು ದೇವೇಗೌಡರು ಹಾಸನದಲ್ಲಿ ವ್ಯಂಗ್ಯವಾಡಿದ್ದಾರೆ.











Click it and Unblock the Notifications