ಶಿರಡಿಗೆ ಭದ್ರತೆ: ಪೊಲೀಸ್ ಠಾಣೆ ಸ್ಥಾಪನೆಗೆ ಆಗ್ರಹ

ಉಪ -ಪೊಲೀಸ್ ಅಧೀಕ್ಷಕ ನೇತೃತ್ವದ 50 ಪೊಲೀಸ್ ಸಿಬಂದಿಯುಳ್ಳ ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯನ್ನು ಸ್ಥಾಪಿಸಬೇಕೆಂದು ಶಿರಡಿ ದೇವಸ್ಥಾನ ಟ್ರಸ್ಟ್ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ. ಈ ಪೊಲೀಸ್ ಠಾಣೆ ದೇವಸ್ಥಾನ ಭದ್ರತೆ ನೋಡಿಕೊಳ್ಳಲು ಮಾತ್ರ ಮೀಸಲಿರಬೇಕೆಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಈ ಮಧ್ಯೆ, ಮಹಾರಾಷ್ಟ್ರ ಸರಕಾರ ಶಿರಡಿ ಕೇಂದ್ರದ ಅಭಿವದ್ಧಿಗೆ 6 ಕೋಟಿ ರು. ಬಿಡುಗಡೆ ಮಾಡಿದೆ.
ಸಾಯಿ ಶಿರಡಿ ಸಂಸ್ಥಾನ ಟ್ರಸ್ಟ್ ದೇಶದ ಪೂಜಾ ಮಂದಿರಗಳಲ್ಲೇ ವಾರ್ಷಿಕ 300 ಕೋಟಿ ರುಪಾಯಿ ಆದಾಯವಿರುವ ಎರಡನೇ ಶ್ರೀಮಂತ ದೇವಸ್ಥಾನ. ದೇಗುಲದ ಟ್ರಸ್ಟ್ ಸುಮಾರು 400 ಕೋ.ರು. ಹಣವನ್ನು ಆಸ್ತಿಗಳ ಮತ್ತು ಸರಕಾರಿ ಬಾಂಡ್‌ಗಳ ಮೇಲೆ ವಿನಿಯೋಗಿಸಿದೆ. ಸಾಯಿಬಾಬಾ ಭಕ್ತರು ಪ್ರತಿ ವರ್ಷ ಟ್ರಸ್ಟ್‌ಗೆ ಕೋಟ್ಯಾಂತರ ರು. ದೇಣಿಗೆ ನೀಡುತ್ತಿದ್ದಾರೆ.
ಕಳೆದ ವಾರ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಟ್ರಸ್ಟಿನ ವಿಶ್ವಸ್ಥರು ಮತ್ತು ಪೊಲೀಸ್ ಅಧಿಕಾರಿಗಳ ಜತೆ ಅವರು ಮಾತನಾಡಿ, ಮಂದಿರದ ಭದ್ರತೆ ಪುನರ್ ಪರಿಶೀಲಿಸಿ, ನೀಲನಕ್ಷೆ ರಚಿಸಲು ಹೇಳಿದ್ದರು.












Click it and Unblock the Notifications