ನಾಗರಬಾವಿ ಡಿನೋಟಿಫಿಕೇಶನ್: ಹೈಕೋರ್ಟ್ ನೋಟಿಸ್

ನಾಗರಬಾವಿ ಮೊದಲ ಹಂತದ ಬಡಾವಣೆ ನಿರ್ಮಾಣಕ್ಕೆ ಸುಮಾರು 5.13 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡಿರುವ ವಿವಾದ ಇದಾಗಿದೆ. 1982ರಲ್ಲಿನ ಪ್ರಾಥಮಿಕ ಅಧಿಸೂಚನೆ ಹಾಗೂ 1985ರ ಅಂತಿಮ ಅಧಿಸೂಚನೆಗಳನ್ನು ಪ್ರಶ್ನಿಸಿ ಬೆಂಗಳೂರು ನಗರ ಸಹಕಾರಿ ಬ್ಯಾಂಕ್ ನೌಕರರ ಸಂಘ ಈ ಹಿಂದೆ ಅರ್ಜಿ ಸಲ್ಲಿಸಿತ್ತು.
ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥಕ್ಕೆ ಬಾಕಿ ಇರುವ ಮಧ್ಯೆಯೇ ಅಕ್ಟೋಬರ್ 19ರಂದು ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದು, ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ (ಡಿನೋಟಿಫೈ) ಕೈಬಿಟ್ಟಿತು.
ಆದೇಶವನ್ನು ಹಿಂದಕ್ಕೆ ಪಡೆದ ಹಿನ್ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿದ ಸರ್ಕಾರದ ಪರ ವಕೀಲರ ವಾದವನ್ನು ನ್ಯಾಯಮೂರ್ತಿಗಳು ತಳ್ಳಿ ಹಾಕಿದರು. ಈ ಮಧ್ಯೆ, ಡಿನೋಟಿಫಿಕೇಷನ್ ಆದೇಶವನ್ನು ಜಮೀನಿನ ಮಾಲೀಕರು ಪ್ರಶ್ನಿಸಿದ್ದಾರೆ. ಎಲ್ಲ ಪ್ರಕರಣಗಳ ವಿಚಾರಣೆಗಳನ್ನು ನ್ಯಾಯಾಲಯ ಒಟ್ಟಿಗೆ ನಡೆಸಲಿದೆ.












Click it and Unblock the Notifications