ಮಂತ್ರಿಮಾಲ್ ಒತ್ತುವರಿ: ಕೊನೆಗೂ ಬುಧವಾರದಿಂದ ತೆರವು

ಮಂತ್ರಿಮಾಲ್ ಸಂಸ್ಥೆಯೇ ಚೆನ್ನೈನಿಂದ ಯಂತ್ರೋಪಕರಣ ತರಿಸಿ ಒತ್ತುವರಿ ತೆರವು ಮಾಡಿಕೊಡುವುದಾಗಿ ತಿಳಿಸಿತ್ತು. ಆದರೆ, ಇದುವರೆಗೂ ತೆರವು ಮಾಡದ ಕಾರಣ ಪಾಲಿಕೆಯಿಂದಲೇ ತೆರವು ಕಾರ್ಯಾಚರಣೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ನಾಲ್ಕು ಮೀಟರ್ ಒತ್ತುವರಿ ತೆರವುಗೊಳಿಸಿ ಸಂಪಿಗೆ ರಸ್ತೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೂ ತಕ್ಷಣ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮಂಗಳವಾರ ನಡೆದ ಪಾಲಿಕೆಯ ಮಾಸಿಕ ಸಭೆಯಲ್ಲಿ ಮಂತ್ರಿ ಮಾಲ್ ಒತ್ತುವರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ, ಪ್ರತಿ ನಿತ್ಯ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎಂ.ನಾಗರಾಜ್ ಪ್ರಸ್ತಾಪಿಸಿದರು.
ಮಂತ್ರಿ ಮಾಲ್ ಸಂಸ್ಥೆಯವರು ಕಟ್ಟಡ ನಿರ್ಮಾಣದಲ್ಲಿ 21 ರೀತಿಯ ಉಲ್ಲಂಘನೆ ಮಾಡಿದ್ದು ಅವರಿಗೆ ನೀಡಿರುವ ಸ್ವಾಧೀನಾನುಭವ ಪತ್ರ ವಾಪಸ್ ಪಡೆಯಲು ಶಿಫಾರಸು ಮಾಡಿದ್ದರೂ ಇದುವರೆಗೂ ಯಾಕೆ ಬಿಟ್ಟಿದ್ದೀರಿ, ಯಾರ ಒತ್ತಡವಿದೆ ಎಂದು ಪ್ರಶ್ನಿಸಿದರು. ಮಂತ್ರಿ ಮಾಲ್ ಒತ್ತುವರಿ ತೆರವು ಯಾವಾಗ ಮಾಡುತ್ತೀರಿ ಎಂಬುದನ್ನು ಈಗಲೇ ತಿಳಿಸಬೇಕು ಎಂದೂ ಪಟ್ಟುಹಿಡಿದರು.












Click it and Unblock the Notifications