ಕೆಜಿಎಫ್ ಬಳಿ ದರೋಡೆ: 45 ಲಕ್ಷ ಚಿನ್ನಾಭರಣ ಅಪಹರಣ

ಗ್ರಾಮದ ಪ್ರಗತಿಪರ ರೈತ ಆನಂದ್ ಮನೆಗೆ ಮುಂಜಾನೆ 1 ಗಂಟೆ ಸಮಯದಲ್ಲಿ ಕಿಟಕಿ ಮುರಿದು ಒಳ ಪ್ರವೇಶಿಸಿದ ಈ ಡಕಾಯಿತರು ಮಾರಕಾಸ್ತ್ರಗಳಿಂದ ಮನೆಯವರನ್ನು ಬೆದರಿಸಿದ್ದಾರೆ.
ಈ ಸಂದರ್ಭದಲ್ಲಿ ಮನೆಯಲ್ಲಿ ಆನಂದ್, ಅವರ ಪತ್ನಿಯರಾದ ಪದ್ಮಮ್ಮ, ಸರಸ್ವತಮ್ಮ ಹಾಗೂ ಕೆಲಸದಾಕೆ ಮೆಣಸಮ್ಮ ಇದ್ದರು. ಬೆಡ್‌ಶೀಟ್‌ಗಳಿಂದ ಅವರನ್ನು ಕಟ್ಟಿಹಾಕಿ, ಬಾಯಿಗೆ ಬಟ್ಟೆ ತುರುಕಿದರು.
ಮನೆಯಲ್ಲಿ ಏನೇನು ಇದೆ ಎಂಬುದನ್ನು ತಿಳಿದುಕೊಂಡ ಡಕಾಯಿತರು ತಮ್ಮ ಕಾರ್ಯಾಚರಣೆ ವೇಳೆ ಯಾವುದೇ ದೈಹಿಕ ಹಲ್ಲೆ ನಡೆಸಲಿಲ್ಲ. ಡಕಾಯಿತರು ಪರಾರಿಯಾದ ನಂತರ ಆಂಡರಸನ್‌ಪೇಟೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಆಂಧ್ರಕ್ಕೆ ಹೋಗುವ ಎಲ್ಲ ದಾರಿಗಳನ್ನು ಶೋಧಿಸಿದರೂ ದರೋಡೆಕೋರರು ಪತ್ತೆಯಾಗಿಲ್ಲ.
ಮನೆಯಲ್ಲಿದ್ದ 3 ಕೆ.ಜಿ ಚಿನ್ನ, 3 ಕೆ.ಜಿ ಬೆಳ್ಳಿ, ರೂ. 98 ಸಾವಿರ ನಗದು ಮತ್ತಿತರ ವಸ್ತುಗಳನ್ನು ಅಪಹರಿಸಲಾಗಿದೆ ಎಂದು ಮನೆಯ ಮಾಲೀಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವಜ್ಯೋತಿ ರೇ, ಡಿವೈಎಸ್‌ಪಿ ಕೆ. ಶೇಷಾದ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಂಡರಸನ್‌ಪೇಟೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ವೆಂಕಟೇಶ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ












Click it and Unblock the Notifications