ಸ್ಪೀಕರ್ ಗೆ ಛೀಮಾರಿ ವಿಶ್ವದಲ್ಲೇ ಮೊದಲು: ದೇವೇಗೌಡ

'ಮೂರನ್ನೂ ಬಿಟ್ಟವರು ಊರಿಗೇ ದೊಡ್ಡವರು' ಎಂಬಂತೆ ಬಿಜೆಪಿಯವರು ಮೆರೆಯುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಸ್ಪೀಕರ್ ಅವರನ್ನು ವಿಧಾನಸಬೆಯಲ್ಲಿ ಶಾಸಕರು ಯುವರ್ ಆನರ್ ಅಥವಾ ರೆಸ್ಪೆಕ್ಟೆಡ್ ಸರ್ ಅಂತ ಕರೆಯಬೇಕೆ? ಇಂತಹ ಸ್ಪೀಕರ್ ಗಳಿದ್ದರೆ ಪ್ರಜಾಪ್ರಭುತ್ವ ಉಳಿಯುತ್ತದೆಯೇ? ಇಂತಹ ಸ್ಪೀಕರ್ ಅವರನ್ನು ನನ್ನ ರಾಜಕೀಯ ಜೀವನದಲ್ಲಿ ಎಲ್ಲೂ ನೋಡಿಲ್ಲ ಎಂದೂ ದೇವೇಗೌಡ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ (ಮೇ 31) ಇಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ವಿಧಾನಸಭೆ ಸ್ಪೀಕರ್ ನಡವಳಿಕೆಯನ್ನು ಕಟುವಾಗಿ ಟೀಕಿಸಿ ಸ್ಪೀಕರ್ ಅನರ್ಹಗೊಳಿಸಿದ್ದ ಶಾಸಕರನ್ನು ಅರ್ಹ ಶಾಸಕರೆಂದು ತೀರ್ಪು ನೀಡಿದೆ. ಸ್ಪೀಕರ್ ನಡವಳಿಕೆ ತಪ್ಪು ಎಂದು ತೀರ್ಪು ನೀಡಿದ ನಂತರವೂ ಅದೇ ಹುದ್ದೆಯಲ್ಲಿ ಮುಂದುವರಿಯುವ ಸ್ಪೀಕರ್ ವಿರುದ್ಧ ಹೋರಾಟದ ಕ್ರಮವಾಗಿ ಜೆಡಿಎಸ್ ಶಾಸನಸಭಾ ಅಧಿವೇಶನವನ್ನು ಬಹಿಷ್ಕರಿಸಿದೆ. ಈ ತೀರ್ಮಾನ ಹೇಡಿತನದ್ದು ಎಂದು ಬಿಜೆಪಿಯವರು ಹೇಳುವುದಾದರೆ ಅವರು ಮೂರನ್ನು ಬಿಟ್ಟವರು ಎಂದು ಕರೆಯದೆ ಬೇರೆ ವಿಧಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಅಧಿವೇಶನಕ್ಕೆ ಮಾತ್ರ ಬಹಿಷ್ಕಾರ ಹಾಕುವ ತೀರ್ಮಾನವನ್ನು ಜೆಡಿಎಸ್ ರಾಜ್ಯ ಘಟಕ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಆಧರಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.











Click it and Unblock the Notifications