ನರೇಂದ್ರ ಮೋದಿ ಬಗ್ಗೆ ಹೆದರಿಕೆ : ಈ ಸಮೀಕ್ಷೆ ನ್ಯಾಯವಾ?

ಹಾಗಾದರೆ ಮೊದಲ ಸ್ಥಾನ ಪಡೆದ ಮೂವರು ಯಾರು? ಅಂತ ಕೇಳಬಹುದು. ಅನುಮಾನವೇ ಬೇಡ. ಅದು ಸೋನಿಯಾ ಆಂಡ್ ಕಂಪನಿ. ದೇಶದ 28 ನಗರಗಳ 9 ಸಾವಿರ ಜನರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ.
ಫಲಿತಾಂಶದಲ್ಲಿ ಶೇ. 30ರಷ್ಟು ಮತ ಕಾಂಗ್ರೆಸ್ ಪಕ್ಷದ ಪರವಾಗಿತ್ತು. ಬಿಜೆಪಿ ಪಾಲಿಗೆ ಸಮೀಕ್ಷೆಯಲ್ಲಿ ಸಿಕ್ಕಿದ್ದು ಶೇ. 23ರಷ್ಟು ಮತ. ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ನರೇಂದ್ರ ಮೋದಿ ಇವರಲ್ಲಿ ಪ್ರಧಾನಿಯಾಗಲು ಯಾರು ಹಿತವರು ಎಂದು ಸಮೀಕ್ಷೆಯಲ್ಲಿ ಕಂಡು ಹಿಡಿಯಲಾಯಿತು.
ಸಮೀಕ್ಷೆಯಲ್ಲಿ ಮನಮೋಹನ್ ಸಿಂಗ್ ಶೇ.21ರಷ್ಟು ಮತ ಪಡೆದು ನಂಬರ್ ಒನ್ ಸ್ಥಾನ ಪಡೆದಿದ್ದಾರೆ. ಶೇ. 19ರಷ್ಟು ಮತ ಪಡೆದ ರಾಹುಲ್ ಗಾಂಧಿ ಮತ್ತು ಶೇ. 14ರಷ್ಟು ಮತ್ತು ಪಡೆದ ಸೋನಿಯಾ ಗಾಂಧಿ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನವನ್ನು ಪಡೆದಿದ್ದಾರೆ. ಶೇ. 12ರಷ್ಟು ಮತ ಪಡೆದ ನರೇಂದ್ರ ಮೋದಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಆದರೆ ಈ ಸಮೀಕ್ಷೆಯೇ ದಾರಿತಪ್ಪಿಸುವಂತದ್ದು, ದುರುದ್ದೇಶಪೂರಿತವಾದದ್ದು ಎಂದು www.sandeepweb.comನ ಸಂದೀಪ್ ವಾದಿಸುತ್ತಾರೆ. ಯಾಕೆಂದರೆ ದೇಶದ ಒಟ್ಟಾರೆ ಮತದಾರರ ಅಭಿಪ್ರಾಯಗಳನ್ನು ಕೇವಲ ಶೇಕಡಾ 0.00001120512016023500 ಸಂವಾದಿಗಳಲ್ಲಿ ಕಂಡು ಹಿಡಿದಿರುವುದು ಸಂಶಯಾಸ್ಪದ. ಈ ಸಮೀಕ್ಷೆ ಜನರನ್ನು ದಾರಿತಪ್ಪಿಸುವಂತಿದೆ ಎನ್ನುತ್ತಾರೆ.












Click it and Unblock the Notifications