ಅಮ್ಮಾ, ನನ್ನ ಮಗನನ್ನು ಚೆನ್ನಾಗಿ ನೋಡಿಕೋ... ದಯವಸೇದ್
ನವದೆಹಲಿ,
ಮೇ 25: ತರಂಗಗುಚ್ಛ ಹಗರಣದ ಸುಳಿಗೆ ಸಿಕ್ಕಿರುವ ಕರುಣಾನಿಧಿ ಸುಳಿ ಕನ್ನಿಮೋಳಿ ತಿಹಾರ್ ಜೈಲಿನಲ್ಲಿ ಕಲ್ಲು ಬೆಂಚಿನ ಮೇಲೆ ಜೀವನ ದೂಡುತ್ತಿದ್ದಾರೆ. ಸದ್ಯಕ್ಕಂತೂ ಆಕೆಗೆ ಜಾಮೀನು ಲಭಿಸುವ ಮಾತು ದೂರವಾಗಿದೆ. ಇಂತಿಪ್ಪ ತನ್ನ ಸುಳಿಯನ್ನು ಕರುಣಾನಿಧಿ ಸೋಮವಾರ ಸಂಜೆ ಜೈಲಿನಲ್ಲಿ ಭೇಟಿಯಾಗಿ, ಯೋಗಕ್ಷೇಮ ವಿಚಾರಿಸಿದ್ದಾರೆ. id="toptextpromo">ಕರುಣಾನಿಧಿ
ಜತೆಗೆ ಹೆತ್ತಮ್ಮ ರಜತಿ ಅಮ್ಮಾಳ್ ಸಹ ಕನಿಮೋಳಿಯನ್ನು ಜೈಲಿನಲ್ಲಿ ಭೇಟಿಯಾಗಿ ಕಣ್ತುಂಬಿಕೊಂಡಿದ್ದಾರೆ. ಇದ್ದುದರಲ್ಲಿ ಕನಿಮೋಳಿಯೇ ಸ್ವಲ್ಪ ಶಾಂತಚಿತ್ತದಿಂದ ಇದ್ದಿದ್ದು. ಮಗಳ ಕರುಣಾಜನಕ ಸ್ಥಿತಿಯನ್ನು ಕಂಡು ಅಪ್ಪ ಕರುಣಾನಿಧಿ ಗೊಳೋ ಎಂದು ಅತ್ತಿದ್ದಾರೆ. ಅಮ್ಮಾಳ್ ರಜನಿ ಸಹ ಬಿಕ್ಕಿ ಬಕ್ಕಿ ಅತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಪ್ಪ-ಅಮ್ಮನನ್ನು
ಹೇಗೋ ಸಮಾಧಾನ ಮಾಡಿದ ಕನಿಮೋಳಿ ನಂತರ ಸ್ವತಃ ತಾನೇ ಭಾವೋದ್ವೇಗಕ್ಕೆ ಒಳಗಾಗಿದ್ದಾಳೆ. ತನ್ನ ಮಗ ಆದಿತ್ಯನ ಬಗ್ಗೆ ಒಂದೇ ಸಮನೆ ಕೇಳಿ, ವಿಚಾರಿಸಿಕೊಂಡಿದ್ದಾಳೆ. ಆದಿತ್ಯನೂ ಜೈಲಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ ಕೊನೆಯ ಕ್ಷಣದಲ್ಲಿ ಮಗನನ್ನು ಕರೆತರುವುದು ಬೇಡ ಎಂದು ಕುಟುಂಬದವರೇ ನಿರ್ಧರಿಸಿದ್ದರು. ಎಲ್ಲ ಆದಮೇಲೆ ಅಮ್ಮನನ್ನು ಪಕ್ಕಕ್ಕೆ ಕರೆದ ಕನಿಮೋಳಿ ಹೇಳಿದ್ದು ಹೀಗೆ: ಅಮ್ಮಾ...ನನ್ನ ಮಗನನ್ನು ಚೆನ್ನಾಗಿ ನೋಡಿಕೋ...ದಯವ್ ಸೇದ್.











Click it and Unblock the Notifications