ಭಾರದ್ವಾಜ್ ರಾಜೀನಾಮೆಗೆ ಬಳ್ಳಾರಿಯಲ್ಲಿ ಶ್ರೀರಾಮುಲು ಆಗ್ರಹ
ಬಳ್ಳಾರಿ,
ಮೇ. 23 : ಕೇಂದ್ರ ಸರ್ಕಾರ ರಾಜ್ಯಪಾಲರ ವರದಿಯನ್ನು ತಿರಸ್ಕರಿಸುವ ಮೂಲಕ ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಕಪಾಳಮೋಕ್ಷ ಮಾಡಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಅಭಿಪ್ರಾಯಪಟ್ಟಿದ್ದಾರೆ. id="toptextpromo">ರಾಜ್ಯಪಾಲ
ಎಚ್.ಆರ್. ಭಾರದ್ವಾಜ್ ಅವರಿಗೆ ನೈತಿಕತೆ ಮತ್ತು ಆತ್ಮಸಾಕ್ಷಿ ಇದ್ದಲ್ಲಿ ಅವರು ಕೂಡಲೇ ರಾಜೀನಾಮೆ ಸಲ್ಲಿಸಬೇಕು. ಕರ್ನಾಟಕ ಕಾಂಗ್ರೆಸ್ ಮತ್ತು ಜೆಡಿಎಸ್‌ನ ರಾಜಕೀಯ ಷಡ್ಯಂತ್ರಗಳಿಗೆ ಕೇಂದ್ರ ಸರ್ಕಾರವನ್ನೇ ಇಕ್ಕಟ್ಟಿಗೆ ಇರಿಸಲು ಯತ್ನಿಸಿದ ಭಾರದ್ವಾಜ್ ಈ ಹುದ್ದೆಯಲ್ಲಿ ಮುಂದುವರೆಯಲು ಅನರ್ಹರು ಎಂದರು. id='are-slot-1' class='oiad oi-axt oiadv'> id='top-searched-articles'>ತೈಲ
ಬೆಲೆ ಏರಿಕೆ, 2ಜಿ ಸ್ಪೆಕ್ಟ್ರಂ ಹಗರಣ, ಕಾಮನ್ ವೆಲ್ತ್ ಗೇಮ್ಸ್ ಹಗರಣ, ಹಣದುಬ್ಬರ ಸೇರಿ ಸಾಲು ಸಾಲು ಆಡಳಿತಾತ್ಮಕ ವೈಫಲ್ಯವೇ ಕೇಂದ್ರದ ಯುಪಿಎಯ 2 ವರ್ಷಗಳ ಸಾಧನೆ. ಈ ಸಾಧನೆಯನ್ನು ಕೇಂದ್ರ ಸರ್ಕಾರ ದೊಡ್ಡದಾಗಿ ಆಚರಿಸಿಕೊಂಡಿದ್ದು ಹಾಸ್ಯಾಸ್ಪದ ಎಂದು ಅವರು ಟೀಕಿಸಿದರು.











Click it and Unblock the Notifications