ಇನ್ಫೋಸಿಸ್ ಹೊಸ ಕ್ಯಾಂಪಸ್‌ಗೆ ಚೀನಾದಲ್ಲಿ ಶಂಕುಸ್ಥಾಪನೆ
ನವದೆಹಲಿ,
ಮೇ.21: ಭಾರತದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿ ಇನ್ಫೋಸಿಸ್ ಚೀನಾದಲ್ಲಿ ಹೊಸ ಕ್ಯಾಂಪಸನ್ನು ಆರಂಭಿಸಲು ನಿರ್ಧರಿಸಿದೆ. ಇದಕ್ಕಾಗಿ ಶಾಂಘೈನಲ್ಲಿ 125 ರಿಂದ 150 ಮಿಲಿಯನ್ ಅಮೆರಿಕನ್ ಡಾಲರ್ ಖರ್ಚು ಮಾಡುತ್ತಿರುವುದಾಗಿ ಕಂಪನಿ ಪ್ರಕಟಿಸಿದೆ. id="toptextpromo">ಚೀನಾದಲ್ಲಿ
ಅತಿಹೆಚ್ಚು ಮೊತ್ತದ ಬಂಡವಾಳ ಹೂಡಿತ್ತಿರುವ ಸಂಸ್ಥೆ ಇನ್ಫೋಸಿಸ್ ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ ನೂತನ ಕಂಪನಿಗೆ ಶನಿವಾರ ಶಂಕುಸ್ಥಾಪನೆ ಮಾಡಲಾಯಿತು. ಒಟ್ಟು 15 ಎಕರೆ ವಿಸ್ತೀರ್ಣದಲ್ಲಿ ಮುಂಬರುವ ಮೂರು ವರ್ಷಗಳ ಅವಧಿಯಲ್ಲಿ ಕ್ಯಾಂಪಸ್ ನಿರ್ಮಾಣವನ್ನು ಪೂರ್ಣಗೊಳಿಸಲಾಗುತ್ತದೆ. id='are-slot-1' class='oiad oi-axt oiadv'> id='top-searched-articles'>ಈ
ಕ್ಯಾಂಪಸ್‌ನಲ್ಲಿ 8 ಸಾವಿರ ಮಂದಿಗೆ ಉದ್ಯೋಗವಕಾಶ ಲಭ್ಯವಾಗಲಿದೆ. ಸಾಫ್ಟ್‌ವೇ ಡೆವಲಪ್‌ಮೆಂಟ್, ಲ್ಯಾಬ್, ಡೇಟಾ ಕೇಂದ್ರಗಳು, ಫುಡ್ ಕೋರ್ಟ್, 1500 ಮಂದಿ ಸಾಮರ್ಥ್ಯದ ಆಡಿಟೋರಿಯಂ, ಜಿಮ್ ಮತ್ತಿತರ ಸೌಲಭ್ಯಗಳನ್ನು ಕ್ಯಾಂಪಸ್‍ನಲ್ಲಿ ನಿರ್ಮಿಸಲಾಗುತ್ತದೆ. (ಏಜೆನ್ಸೀಸ್)











Click it and Unblock the Notifications