'ಅಧಿವೇಶನಕ್ಕೆ ಅಸ್ತು ಎನ್ನದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ'
ಬೆಂಗಳೂರು,
ಮೇ 19: ಗುರುವಾರ ಸಂಜೆ (ಮೇ 19) ವೇಳೆಗೆ ಅಧಿವೇಶನ ನಡೆಸುವುದಕ್ಕೆ ಅನುಮತಿ ನೀಡಿ. ಇಲ್ಲದಿದ್ದರೆ ರಾಜ್ಯದ್ಯಾಂತ ಜನಾಂದೋಲನ ನಡೆಸುವೆ ಎಂದು ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯಪಾಲರು ಮತ್ತು ಕೇಂದ್ರ ಸರಕಾರಕ್ಕೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. id="toptextpromo">ವೈಷ್ಣೋದೇವಿ
ಭೇಟಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು ಇಂದು ಸಂಜೆಯೇ ಬೆಂಗಳೂರಿಗೆ ವಾಪಸ್ ಬರುವೆ. ಅಷ್ಟರೊಳಗಾಗಿ ಕೇಂದ್ರ ಸರಕಾರವು ರಾಜ್ಯಪಾಳರ ವರದಿ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿಬೇಕು. ರಾಜ್ಯಪಾಲರೂ ಈ ಬಗ್ಗೆ ಮೌನವನ್ನು ಮುರಿದು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಡೆಡ್ ಲೈನ್ ನೀಡಿದರು. id='are-slot-1' class='oiad oi-axt oiadv'> id='top-searched-articles'>ಅಧಿವೇಶನ
ನಡೆಸುವುದಕ್ಕೆ ಇಂದು ಒಪ್ಪಿಗೆ ನೀಡದಿದ್ದರೆ ಶುಕ್ರವಾರದಿಂದ ರಾಜ್ಯದ ಉದ್ದಗಲಕ್ಕೂ ಜನಾಂದೋಲನ ಸಭೆಗಳನ್ನು ನಡೆಸುತ್ತೇವೆ. ನಾನೇ ಇದರ ನೇತೃತ್ವ ವಹಿಸುತ್ತೇನೆ. ಬೀದಿಬೀದಿಗಳಲ್ಲಿ ಜನರನ್ನು ಭೇಟಿ ಮಾಡಿ, ಅವರಿಗೆ ನನ್ನ ಸರಕಾರದ ಸಾಧನೆಗಳ ಬಗ್ಗೆ ತಿಳಿಸುವೆ ಎಂದು ಯಡಿಯೂರಪ್ಪ ಕೇಂದ್ರ ಸರಕಾರದ ವಿಳಂಬ ಧೋರಣೆ ಬಗ್ಗೆ ಹತಾಶೆಯಿಂದ ಮಾತನಾಡಿದರು.











Click it and Unblock the Notifications