ಹಾಸನದಲ್ಲಿ ಚಿರತೆಯನ್ನು ಕಲ್ಲು ಹೊಡೆದು ಕೊಂದರು
ಹಾಸನ,
ಮೇ 19: ತೀವ್ರ ಕಾಲು ನೋವಿನಿಂದ ಯಾತನೆ ಪಡುತ್ತಿದ್ದ ಚಿರತೆಯೊಂದು ಹಾಸನದ ಗ್ರಾಮವೊಂದಕ್ಕೆ ಪ್ರವೇಶಿಸಿತ್ತು. ಆದರೆ ಅದನ್ನು ಗ್ರಾಮಸ್ಥರು ಕಲ್ಲು ಹೊಡೆದು ಅಮಾನವೀಯವಾಗಿ ಸಾಯಿಸಿದ ಘಟನೆ ನಡೆದಿದೆ. id="toptextpromo">ಸುಮಾರು
8 ವರ್ಷ ಪ್ರಾಯದ ಚಿರತೆಯೊಂದು ಹಾಸನದ ಲಿಂಗರಸನಹಳ್ಳಿಗೆ ಪ್ರವೇಶಿಸಿತ್ತು. ಕೋಳಿ ಫಾರ್ಮ್ ಸಮೀಪದಲ್ಲಿ ಅಡಗಿದ್ದ ಚಿರತೆಯನ್ನು ಗ್ರಾಮಸ್ಥರು ಗಮನಿಸಿದರು. ಕಾಲಿಗೆ ತೀವ್ರ ಗಾಯವಾಗಿದ್ದರಿಂದ ಅದಕ್ಕೆ ಓಡಲು ಸಾಧ್ಯವಾಗಿರಲಿಲ್ಲ. ಗ್ರಾಮಸ್ಥರು ತಕ್ಷಣ ಪೋಲಿಸರಿಗೆ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. id='are-slot-1' class='oiad oi-axt oiadv'> id='top-searched-articles'>ಆದರೆ
ಅರಣ್ಯ ಸಿಬ್ಬಂದಿ ಕೆಲವು ಗಂಟೆ ತಡವಾಗಿ ಆಗಮಿಸಿದರು. ಆದರೆ ಅದಕ್ಕೂ ಮುನ್ನ ಕೋಳಿ ಫಾರ್ಮ್ ನಿಂದ ಹೊರಬಂದ ಚಿರತೆ ಹತ್ತಿರ ಬಂದ ಇಬ್ಬರನ್ನು ಗಾಯಗೊಳಿಸಿತು. ಆಗ ಗ್ರಾಮಸ್ಥರು ಅದನ್ನು ಕಲ್ಲು ಹೊಡೆದು ಸಾಯಿಸಿದ್ದಾರೆ. ಗ್ರಾಮಸ್ಥರಾದ ಶ್ರೀನಿವಾಸ್ ಮತ್ತು ಚಿರತೆಯನ್ನು ಶೂಟಿಂಗ್ ಮಾಡುತ್ತಿದ್ದ ಕ್ಯಾಮರಾಮೆನ್ ಗಾಯಗೊಂಡಿದ್ದಾರೆ.











Click it and Unblock the Notifications