ಭೀಮಾ ನದಿ ದಡದಲ್ಲಿ ಮೀನುಗಳ ಮಾರಣ ಹೋಮ

ಗಮನಕ್ಕೇ ಬಂದಿಲ್ಲ : ಕಳೆದ ಎರಡು ದಿನಗಳಿಂದ ಅಪಾರ ಪ್ರಮಾಣದಲ್ಲಿ ನದಿಯಲ್ಲಿ ಮೀನುಗಳು ಸಾಯುತ್ತಿದ್ದರೂ ಸಂಬಂಧಪಟ್ಟ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ಇದುವರೆಗೂ ಇತ್ತ ಕಡೆ ತಲೆ ಹಾಕಿಲ್ಲವೆಂದು ಭೀಮಾ ನದಿ ದಡದ ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕುಡಿಯುತ್ತಿರುವುದು ಅದೇ ನೀರು: ಯಾದಗಿರಿ ನಗರಕ್ಕೆ ಮೀನುಗಳು ಸತ್ತಿರುವ ಭೀಮಾ ನದಿಯಿಂದಲೇ ಕುಡಿಯುವ ನೀರು ಪೂರೈಕೆಯಾಗುತ್ತದೆ. ನಗರಸಭೆ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಳಿಕ ಯಾವುದೇ ಕ್ರಮ ಕೈಗೊಡಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯೂ ಈ ಬಗ್ಗೆ ಗಮನಹರಿಸಿಲ್ಲ.
ಚರಂಡಿ ನೀರು ಹಾಗೂ ಹೊಲಗಳಿಂದ ಬಿಡುವ ನೀರು ಈ ಸ್ಥಳದಲ್ಲಿ ಸೇರಿ ನದಿ ನೀರು ಕಲುಷಿತವಾಗುತ್ತಿದೆ. ಈ ನೀರನ್ನು ಕುಡಿಯುವುದರಿಂದ ರೋಗ ರುಜಿನಗಳು ಬಂದು ಜನರು ಸಾಯುವುದಕ್ಕಿಂತ ಮುಂಚೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ. ನದಿಯ ನೀರು ಕಡಿಮೆಯಾಗಿರುವುದೇ ಮೀನುಗಳ ಸಾವಿಗೆ ಕಾರಣ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.











Click it and Unblock the Notifications