ದ.ಕ ನೂತನ ಜಿಲ್ಲಾಧಿಕಾರಿ ಮುಂದೆ ಮರಳು ದಂಧೆ

NS Channappa Gowda
ಮಂಗಳೂರು, ಮೇ 17: ಅಕ್ರಮ ಮರಳು ಸಾಗಾಟ ನಿಯಮವನ್ನು ಶೀಘ್ರದಲ್ಲಿ ಅನುಷ್ಠಾನಕ್ಕೆ ತರಲು ಯತ್ನಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಎನ್. ಎಸ್ ಚನ್ನಪ್ಪ ಗೌಡ ಹೇಳಿದ್ದಾರೆ. ಈಗ ಮರಳು ಸಾಗಾಟ ವಿಷಯ ಸರಕಾರ ಮತ್ತು ನ್ಯಾಯಾಲಯದ ಮಧ್ಯೆ ಇದೆ. ಹೀಗಾಗಿ ಜೂನ್ ತಿಂಗಳವರೆಗೆ ಹಳೆಯ ಲೀಸ್ ಪಡೆದವರೇ ಮರಳುಗಾರಿಕೆ ನಡೆಸಲಿದ್ದಾರೆ ಎಂದರು.

ಆದರೆ ಸರಕಾರವು ಶೀಘ್ರದಲ್ಲಿ ನೂತನ ನಿಯಮಾವಳಿ ರೂಪಿಸುವ ಸಾಧ್ಯತೆಯಿದೆ. ನಂತರ ಅದಕ್ಕನುಗುಣವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಚನ್ನಪ್ಪ ಗೌಡ ತುಮಕೂರು ಜಿಲ್ಲೆಯವರಾಗಿದ್ದು, ಎಂಎಸ್ ಪದವಿ ಪಡೆದಿದ್ದಾರೆ. ಜೊತೆಗೆ ನಗರಾಭಿವೃದ್ಧಿ ವಿಷಯದಲ್ಲಿ ಪಿಎಚ್ ಡಿ ಪಡೆದಿದ್ದಾರೆ. ಈ ಹಿಂದೆ ಇವರು ಚಿಕ್ಕ ಮಗಳೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+