ಪಿಯುಸಿ ಫಲಿತಾಂಶ ನೋಡಿಬಂದ ಹುಡುಗಿ ನಾಪತ್ತೆ!

ನಾಪತ್ತೆಯಾದ ವಿದ್ಯಾರ್ಥಿನಿ ಗೋವಿಂದನಗರದ ನಿವಾಸಿಯಾಗಿದ್ದು ಸಂಘಮಿತ್ರ ಕಾಲೇಜಿನಲ್ಲಿ ವ್ಯಾಸಂಗಮಾಡುತ್ತಿದ್ದಳು. ಬುಧವಾರ ಪೂರ್ವಾಹ್ನ ಸ್ನೇಹಿತೆಯರೊಂದಿಗೆ ದೇವಸ್ಥಾನಕ್ಕೆ ಹೋಗಿ ಬರುತ್ತೆನೆಂದು ಹೋದವಳು ವಾಪಸ್ಸು ಬಂದಿಲ್ಲವೆಂದು ಆಕೆಯ ತಂದೆ ಶಿವಣ್ಣ ಪೋಲಿಸ್ ಪ್ರಕರಣ ದಾಖಲಿಸಿದ್ದಾರೆ. ಶಿವಣ್ಣ ಹೋಟೆಲೊಂದರಲ್ಲಿ ಸಹಾಯಕ ಅಡುಗೆಯಾತ. ತಾನಿನ್ನು ವಾಪಸ್ಸು ಬರುವುದಿಲ್ಲವೆಂದು ತನ್ನ ಸ್ನೇಹಿತೆಯರಿಗೆ ಮೆಸೆಜ್ ಕಳುಹಿಸಿದ್ದಾಳೆಂದು ಕೆಲವು ಮೂಲಗಳು ತಿಳಿಸಿವೆ. [ಕರ್ನಾಟಕ ಎಸ್ಸೆಸ್ಸೆಲ್ಸಿ ಫಲಿತಾಂಶ 2011]












Click it and Unblock the Notifications