ಮತ್ತೆ ವಿಮಾನ ನಿಲ್ದಾಣದತ್ತ ಮುಖ ಮಾಡಿದ ಮೇರು ಕ್ಯಾಬ್
ಬೆಂಗಳೂರು,
ಮೇ 12: ಕಳೆದೊಂದು ವಾರದಿಂದ ಮೇರೆ ಮೀರಿದ್ದ ಮೇರು ಕ್ಯಾಬ್ ಚಾಲಕರ ಮುಷ್ಕರ, ಹಿಂಸಾಚಾರ ಈಗ ತಣ್ಣಗಾಗಿದ್ದು, ಗುರುವಾರ ಬೆಳಗ್ಗೆಯಿಂದ ಕ್ಯಾಬ್ ಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಶರವೇಗದಲ್ಲಿ ಓಡತೊಡಗಿವೆ. ಚಾಲಕರ ಬೇಡಿಕೆಗಳನ್ನು ಪರಿಗಣಿಸುವುದಾಗಿ ಮೇರು ಕಂಪನಿ ಅಧಿಕಾರಿಗಳು ಆಶ್ವಾಸನೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆಯಲಾಗಿದೆ ಎಂದು ಚಾಲಕರು ಹೇಳಿದ್ದಾರೆ. id="toptextpromo">ಕಳೆದ
ಮೂರು ವರ್ಷಗಳಿಂದ ಪ್ರಯಾಣ ದರ ಹೆಚ್ಚಿಸಿಲ್ಲ. ಇನ್ನಾದರೂ ದರ ಏರಿಸಬೇಕು ಮತ್ತು ನೋಂದಾವಣೆ ದರವನ್ನು ತಗ್ಗಿಸಬೇಕು ಎಂಬುದು ಚಾಲಕರ ಪ್ರಮುಖ ಬೇಡಿಕೆಯಾಗಿದೆ. ಮೇ 2ರಿಂದ ಸಂಸ್ಥೆಯ ಚಾಲಕರು ಈ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರದಲ್ಲಿ ತೊಡಗಿದ್ದರು. 1400ಕ್ಕೂ ಹೆಚ್ಚು ಮೇರು ಕ್ಯಾಬ್ ಗಳು ರಸ್ತೆಗಳಿದಿರಲಿಲ್ಲ. ಈ ಮಧ್ಯೆ, ಪ್ರಯಾಣಿಕರು ವಜ್ರಾದಪಿ ಬಿಎಂಟಿಸಿಗೆ ಜೋತುಬಿದ್ದಿದ್ದರು. id='are-slot-1' class='oiad oi-axt oiadv'> id='top-searched-articles'>ಕಳೆದ
ಬುಧವಾರ ಒಂದು ಕ್ಯಾಬ್ ಅನ್ನು ಸಂಪೂರ್ಣವಾಗಿ ಸುಟ್ಟುಹಾಕುವ ಮೂಲಕ ಹಿಂಸಾಚಾರಕ್ಕಿಳಿದು, ಆಕ್ರೋಶ ವ್ಯಕ್ತಪಡಿಸಿದ್ದ ಚಾಲಕರು ಸಂಸ್ಥೆಗೆ ಸೇರಿದ 20ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿದ್ದರು. ಸಂಸ್ಥೆಯ ಕ್ಯಾಬ್ ಗಳ ಗಾಜುಗಳು ಮತ್ತು ಕಚೇರಿಯ ಗಾಜುಗಳನ್ನು ಪುಡಿ ಪುಡಿ ಮಾಡಿದ್ದರು.











Click it and Unblock the Notifications