ಮುಂದಿನ ಬಾರಿ ಪಾಸಾಗ್ತಿನಿ ಅನ್ನಿ, ಆತ್ಮಹತ್ಯೆ ಬೇಡ

Don't worry, Be happy
ಇಂದು ದ್ವಿತೀಯ ಪಿಯುಸಿ ಫಲಿತಾಂಶ. ನಾಡಿದ್ದು ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ. ಫಲಿತಾಂಶದ ಮರುದಿನ ಪತ್ರಿಕೆಗಳನ್ನು ನೋಡಲು ಒಂದಿಷ್ಟು ಅಂಜಿಕೆಯಾಗುತ್ತದೆ. ನಪಾಸಾದ ವಿದ್ಯಾರ್ಥಿಗಳ ಆತ್ಮಹತ್ಯೆಗಳದ್ದೇ ಸುದ್ದಿ ಇರುತ್ತದೆ. ಪರೀಕ್ಷೆ ಫಲಿತಾಂಶದಂದು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಒಂದಿಷ್ಟು ಸಲಹೆಗಳು ಇಲ್ಲಿವೆ.

ಕರ್ನಾಟಕ ಎಸ್ಎಸ್ಎಲ್ ಸಿ ಫಲಿತಾಂಶ 2011 ಪ್ರಕಟ

ಪೋಷಕರಿಗೆ ಸಲಹೆ
* ಫಲಿತಾಂಶ ಏನೇ ಇರಲಿ ನನಗೆ ನೀನು ಮುಖ್ಯ ಅನ್ನೋ ರೀತಿಯಲ್ಲಿ ವರ್ತಿಸಿ.
* ಮುಂದಿನ ಶಿಕ್ಷಣದ ಕುರಿತು ಫಲಿತಾಂಶ ಬರೋ ದಿನ ಚರ್ಚೆ ಬೇಡ.
* ಮನೆಯಲ್ಲಿ ಅವರನ್ನು ಒಂಟಿಯಾಗಿ ಬಿಟ್ಟು ಹೋಗದಿರಿ.
* ಮಕ್ಕಳಿಗೆ ಧೈರ್ಯ ತುಂಬಿರಿ.
* ಫಲಿತಾಂಶದ ಕುರಿತು ನೀವು ಹೆಚ್ಚು ಟೆನ್ಶನ್ ತೋರಗೊಡದಿರಿ. ಇದರಿಂದ ಮಕ್ಕಳು ಇನ್ನಷ್ಟು ಅಧೀರರಾಗುತ್ತಾರೆ.

ವಿದ್ಯಾರ್ಥಿಗಳಿಗೆ ಸಲಹೆ
* ಫಲಿತಾಂಶ ಚೆನ್ನಾಗಿ ಬಂದಿದ್ದರೆ ಸಂಭ್ರಮಿಸಿ. ಚೆನ್ನಾಗಿ ಬಂದಿಲ್ಲ ಅಂದರೆ ಮುಂದಿನ ಬಾರಿ ಚೆನ್ನಾಗಿ ಮಾಡಬಲ್ಲೆ ಅಂತ ಆತ್ಮವಿಶ್ವಾಸದಿಂದಿರಿ.
* ಫೇಲ್ ಆಗಿರೋ ನಿಮ್ಮ ಸ್ನೇಹಿತ ಸ್ನೇಹಿತೆಯರನ್ನು ಅವಹೇಳನ ಮಾಡಬೇಡಿ. ಅವರಿಗೆ ಧೈರ್ಯ ತುಂಬಿ. ಸಾಧ್ಯವಾದರೆ ಅವರನ್ನು ಒಂಟಿಯಾಗಲು ಬಿಡಬೇಡಿ.
* ಒಮ್ಮೆ ಯೋಚಿಸಿ ಇಷ್ಟು ವರ್ಷ ನಿಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿದ ಅಪ್ಪ ಅಮ್ಮನಿಗೆ ನಿಮ್ಮ ಸಾವಿನಿಂದ ಎಷ್ಟು ದುಃಖವಾಗಬಹುದು ಅಂತ. ಅವರಿಗಾಗಿ ಬದುಕಿಬಿಡಿ.
* ಫೇಲ್ ಆಗಿರೋ ವಿಷಯಕ್ಕೆ ಅಪ್ಪ ಅಮ್ಮನಿಗೆ ಹೆದರಬೇಡಿ. ಮುಂದಿನ ಬಾರಿ ಪಾಸಾಗ್ತಿನಿ ಅನ್ನಿ.
* ಪಾಸಾಗಿರುವವರು ಸಾಧಿಸಿದಕ್ಕಿಂತ ಹೆಚ್ಚು ಸಾಧಿಸ್ತಿನಿ ಅಂತ ನಿರ್ಧಾರ ಮಾಡಿಬಿಡಿ.
* ಬದುಕಿದರೆ ಏನೂ ಬೇಕಾದರೂ ಸಾಧಿಸಬಹುದು ಅಲ್ಲವೇ. ಎಡವಿ ಬಿದ್ದರೇನಂತೆ ಎದ್ದುಬಿಡಿ.

ಛಲ, ಆತ್ಮವಿಶ್ವಾಸವಿದ್ದರೆ ಬದುಕಿನಲ್ಲಿ ಏನೂ ಬೇಕಾದರೂ ಸಾಧಿಸಬಹುದು. ಫೇಲ್ ಆದರೆ ಏನಂತೆ? ಬದುಕಿನಲ್ಲಿ ಪಾಸ್ ಆದರೆ ಸಾಕಲ್ವ. ಈ ಬಾರಿ ಪರೀಕ್ಷೆ ಫಲಿತಾಂಶ ನೋಡಿ ಬಂದ ಯಾವ ಮನೆಯಲ್ಲೂ ಸಾವಿನ ಸೂತಕವಿಲ್ಲದಿರಲಿ. ಆಲ್ ದಿ ಬೆಸ್ಟ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+