ಮುಂಬೈನಲ್ಲಿ ಬೆಳ್ತಂಗಡಿ ಗೃಹಿಣಿ ನಿಗೂಢ ಸಾವು

ಮುಂಬೈನ ಥಾನೆಯ ಕ್ಯಾಂಟಿನೊಂದರಲ್ಲಿ ಮ್ಯಾನೆಜರ್ ಆಗಿರುವ ತಾರಾನಾಥ್ ಶೆಟ್ಟಿ ಎಂಬವರನ್ನು ಶಾಲಿನಿ ಸುಮಾರು ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. ಇವರು ಮದುವೆ ಕಾರ್ಯಕ್ರಮವೊಂದಕ್ಕೆ ಮೇ ಎಂಟರಂದು ಊರಿಗೆ ಬರಲು ಟಿಕೆಟ್ ಕೂಡ ಬುಕ್ ಮಾಡಲಾಗಿತ್ತು. ಮೇ ಒಂಬತ್ತರಂದು ಇವರಿಬ್ಬರ ಮದುವೆಯ ಎರಡನೇ ವಾರ್ಷಿಕೋತ್ಸವವಾಗಿತ್ತು. ಆದರೆ ಇಂದು ಲಾಯಿಲಾ ಗ್ರಾಮದಲ್ಲಿ ಆಕೆಯ ಅಂತ್ಯಸಂಸ್ಕಾರ ನಡೆಯಲಿದೆ.
ಎಂದಿನಂತೆ ಅಂದು ಕೂಡ ತಾರನಾಥ್ ಕೆಲಸಕ್ಕೆ ಬೇಗ ಮನೆಬಿಟ್ಟಿದ್ದರು. ಪ್ರತಿದಿನ ಇವರು ಮನೆಗೆ ಹಿಂತುರುಗುವಾಗ ರಾತ್ರಿ 10 ಕಳೆಯುತ್ತಿತ್ತು. ಆದರೆ ಮೊನ್ನೆ ಮಂಗಳವಾರ ಸಂಜೆ ಮನೆಗೆ ಫೋನ್ ಮಾಡಿದಾಗ ಶಾಲಿನಿ ರಿಸಿವ್ ಮಾಡಿರಲಿಲ್ಲ. ತಕ್ಷಣ ಫ್ಲಾಟ್ ಗೆ ಬಂದ ತಾರನಾಥ್ ಗೆ ಕಂಡದ್ದು ಮಡದಿಯ ಮೃತದೇಹ.
ಶಾಲಿನಿ ಅಲ್ಲಿ ಅನುಮಾನಸ್ಪದವಾಗಿ ಕೊಲೆಯಾಗಿದ್ದಳು. ಫ್ಲಾಟ್ ನ ಎದುರಿನ ಬಾಗಿಲು ತೆರೆದಿತು. ಟೆಲಿವಿಷನ್ ವಾಲ್ಯುಮ್ ಜೋರಾಗಿಡಲಾಗಿತ್ತು. ಮನೆಯಲ್ಲಿದ್ದ ಒಡವೆಗಳನ್ನು ದೋಚಲಾಗಿತ್ತು. ಆದರೆ ಅಲ್ಲಿದ್ದ ಲಿಂಬೆ ಜ್ಯೂಸ್ ಮತ್ತು ಚಿಪ್ಸ್ ಗಳು ಈ ಕೊಲೆ ಪರಿಚಿತರಿಂದ ನಡೆದಿರಬಹುದೇ ಎಂಬ ಸಂಶಯವನ್ನು ಉಂಟು ಮಾಡಿದೆ. ಪೋಲಿಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications