ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಲಿಕಾಪ್ಟರ್ ಸಹವಾಸ ಬೇಡಪ್ಪ ಎಂದ ಯಡಿಯೂರಪ್ಪ

By Rajendra
|
Google Oneindia Kannada News

Yeddyurappa
ಮೈಸೂರು, ಮೇ.5: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ ಹಾಗೂ ಅರುಣಾಚಲ ಸಿಎಂ ದೋರ್ಜಿ ಖಂಡು ಅವರ ದುರಂತ ಸಾವು ನಮ್ಮ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಭಯಬೀತಗೊಳಿಸಿದೆ. ಸದ್ಯಕ್ಕೆ ಅವರು ಹೆಲಿಕಾಪ್ಟರ್ ಎಂದರೆ ಬೆಚ್ಚಿಬೀಳುವಂತಾಗಿದೆ. ಮಳೆಗಾಲ ಮುಗಿಯುವ ತನಕ ಹೆಲಿಕಾಪ್ಟರ್ ಸಹವಾಸ ಬೇಡಪ್ಪ ಎಂದಿದ್ದಾರೆ ಯಡಿಯೂರಪ್ಪ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಹೆಲಿಕಾಪ್ಟರ್ ಹತ್ತಲು ಅವರು ಸುತಾರಾಂ ಒಲ್ಲೆ ಎಂದಿದ್ದಾರೆ. ಹೆಲಿಕಾಪ್ಟರ್ ಬದಲಿಗೆ ಲಘು ವಿಮಾನದಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದದ್ದು ವಿಶೇಷವಾಗಿತ್ತು. ಯಾಕೆ ಸಾರ್ ಎಂದು ಕೇಳಿದ್ದಕ್ಕೆ. ಅವರು ಹೇಳಿದ್ದಿಷ್ಟು.

"ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಬೇಕಾದರೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕಾಗಿದೆ. ನಾನಂತೂ ಮಳೆಗಾಲ ಕಳೆಯುವ ತನಕ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲ್ಲ. ಹವಾಮಾನ ನೋಡಿಕೊಂಡೇ ಹೆಲಿಕಾಪ್ಟರ್ ಹತ್ತುವುದಾಗಿ ತಿಳಿಸಿದ ಅವರು, ಬಳಿಕ ಖಂಡು ಅವರ ದುರಂತ ಸಾವಿಗೆ ಮರುಗಿದರು.ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ" ಎಂದರು.

English summary
Karnataka chief minister BS Yeddyurappa fears to board helicopter after the tragic accidental death of AP former Chief Minister YSR and Arunachal Pradesh CM Dorjee Khadu. On Wednesday, he came in a light aircraft that has landed at Mandakalli airport. After he expressed his condolence for Khadu's death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X