ಅನಾರೋಗ್ಯದ ನಿಮಿತ್ತ ವಿಚಾರಣೆಗೆ ಹಾಲಪ್ಪ ಚಕ್ಕರ್
ಶಿವಮೊಗ್ಗ,
ಮೇ.5: ಮಾಜಿ ಸಚಿವ ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣದ ವಿಚಾರಣೆ ಇಂದು (ಮೇ.5) ಶಿವಮೊಗ್ಗದ ಮೂರನೇ ಜೆಎಂಎಫ್ ನ್ಯಾಯಾಲಯದಲ್ಲಿ ನಡೆಯಬೇಕಾಗಿತ್ತು. ಆದರೆ ಹಾಲಪ್ಪ ಅವರು ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಅವರು ಇಂದು ಕೋರ್ಟ್‌ಗೆ ಹಾಜರಾಗಲಿಲ್ಲ. id="toptextpromo">ತಾವು
ಅನಾರೋಗ್ಯದ ನಿಮಿತ್ತ ಮಲ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ. ವಿಚಾರಣೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಹಾಲಪ್ಪ ನ್ಯಾಯಾಲಕ್ಕೆ ತಿಳಿಸಿದ್ದಾರೆ ಎಂದು ಅವರ ಪರ ವಕೀಲರು ತಿಳಿಸಿದರು. ಹಾಗಾಗಿ ಚಂದ್ರಾವತಿ ಮೇಲಿನ ಹಾಲಪ್ಪ ಅತ್ಯಾಚಾರ ಪ್ರಕರಣವನ್ನು ಮೇ 23ಕ್ಕೆ ನ್ಯಾಯಾಧೀಶರಾದ ಶ್ರೀನಿವಾಸ ಗೌಡ ಮುಂದೂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹಾಲಪ್ಪ
ಅತ್ಯಾಚಾರ ನಡೆಸಿದ್ದಾರೆ ಎಂದು ಹೈದರಾಬಾದಿನ ಲ್ಯಾಬ್ ವರದಿ ನೀಡಿದೆ. ಎರಡೆರಡು ಬಾರಿ ಪರೀಕ್ಷೆ ನಡೆಸಿ ಇದನ್ನು ದೃಢಪಡಿಸಲಾಗಿದೆ ಎಂದು ಸಿಐಡಿ ಮೂಲಗಳು ಹೇಳಿವೆ. ಆರೋಪಿ ಹಾಲಪ್ಪನ ಪಂಚೆಯಲ್ಲಿ ಆತನ ವೀರ್ಯ ಪತ್ತೆಯಾಗಿದೆ. ಅದೇ ವೀರ್ಯ ಮಹಿಳೆಯ (ಚಂದ್ರಾವತಿಯ) ಒಳ ಉಡುಪು, ನೈಟಿ ಮತ್ತು ಬೆಡ್‌ಶೀಟಿನಲ್ಲಿ ಪತ್ತೆಯಾಗಿದೆ. ಡಿಎನ್‌ಎ ಪರೀಕ್ಷೆಯಲ್ಲೂ ಈ ಅಂಶ ದೃಢಪಟ್ಟಿದೆ.











Click it and Unblock the Notifications