ಅಮ್ಮನ ಆಶೀರ್ವಾದ: ಮಂಗಳೂರು ಸ್ವಚ್ಛ ಸುಂದರ
ಮಂಗಳೂರು,
ಮೇ 3: ವಿದೇಶಿಯರು, ವಿದ್ಯಾರ್ಥಿಗಳು, ನಾಗರಿಕರು ಸೇರಿದಂತೆ ನೂರಾರು ಮಾತಾ ಅಮೃತಾನಂದಮಯಿ ಭಕ್ತರ ಪಾಲ್ಗೊಳ್ಳುವಿಕೆಯ ಮೂಲಕ ಮಂಗಳೂರು ನಗರದಲ್ಲಿ ಸಂಪೂರ್ಣ ಸ್ವಚ್ಛತಾ ಅಭಿಯಾನ ಇಂದು ಆರಂಭವಾಗಿದೆ. ಅಮ್ಮ ಅವರ ಕನಸಿನ ಯೋಜನೆ "ಅಮಲಾ ಭಾರತಂ" ನಗರಕ್ಕೆ ವಿಸ್ತರಿಸಲಾಗಿದ್ದು, ಇದನ್ನು ಸಾಕಾರಗೊಳಿಸುವ ಉದ್ದೇಶದಿಂದ ಸಂಪೂರ್ಣ ಸ್ವಚ್ಛತಾ ಅಭಿಯಾನ ಆರಂಭಿಸಲಾಗಿದೆ. id="toptextpromo">ಇಂದು
ನಗರದ ಬೀದಿಬೀದಿಗಳನ್ನು ಅಮ್ಮನ ಭಕ್ತರು ಶ್ರದ್ಧೆಯಿಂದ ಸ್ವಚ್ಛಗೊಳಿಸುತ್ತಿರುವುದು ಕಂಡು ಬಂತು. ಈ ಅಭಿಯಾನಕ್ಕೆ ನಗರಾಡಳಿತವೂ ಸಂಪೂರ್ಣ ಬೆಂಬಲ ನೀಡಿತ್ತು. ನಗರದ ಮೇಯರ್ ಪ್ರವೀಣ್, ಆರೋಗ್ಯಾಧಿಕಾರಿಗಳಾದ ಮಂಜಯ್ಯ ಶೆಟ್ಟಿ, ಬಸವರಾಜು ಮತ್ತು ಕಾರ್ಪೊರೆಟರ್ ನವೀನ್ ಮತ್ತು ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು ಸೇರಿದಂತೆ ಹಲವು ಮಂದಿ ಈ ಅಭಿಯಾನದಲ್ಲಿ ಪಾಲ್ಗೊಂಡರು. id='are-slot-1' class='oiad oi-axt oiadv'> id='top-searched-articles'>ಮಂಗಳೂರು
ಬ್ರಹ್ಮಸ್ಥಾನ ಉತ್ಸವಕ್ಕಾಗಿ ಮಾತಾ ಅಮೃತಾನಂದಮಯಿ ಮೇ ಒಂದು ಮತ್ತು ಎರಡರಂದು ನಗರಕ್ಕೆ ಭೇಟಿ ನೀಡಿದ್ದರು."ಮುಂದಿನ ತಲೆಮಾರಿಗೆ ಪರಿಸರವನ್ನು ಸುಂದರವಾಗಿ ಕಾಪಾಡಿಕೊಳ್ಳಬೇಕು" ಎಂದು ಈ ಸಂದರ್ಭದಲ್ಲಿ ಅವರು ಕರೆ ನೀಡಿದ್ದರು. ಮಾತಾ ಅಮೃತಾನಂದಮಯಿ ದೇಶದ ವಿವಿಧ ಭಾಗಗಳಲ್ಲಿ "ಅಮಲಾ ಭಾರತಂ" ಎಂಬ ಯೋಜನೆಯನ್ನು ಸಾಕಾರಗೊಳಿಸುತ್ತಿದ್ದಾರೆ.











Click it and Unblock the Notifications