ಮೈಸೂರಿನ ಭ್ರಷ್ಟಾಚಾರ ವಿರೋಧಿಗಳೇ ಎದ್ದೇಳಿ
ಮೈಸೂರು,
ಏ.28 : ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಮೇ 5ರಂದು ಮೈಸೂರಿಗೆ ಆಗಮಿಸಲಿದ್ದಾರೆ. ಆ ದಿನ ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಭ್ರಷ್ಟಾಚಾರ ಹಾಗೂ ಜನ ಲೋಕಪಾಲ್ ಮಸೂದೆ ಕುರಿತಂತೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. id="toptextpromo">ಈ
ವಿಷಯವನ್ನು ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಡಾ.ಬಾಲಸುಬ್ರಹ್ಮಣ್ಯಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಂದು ನಡೆಯಲಿರುವ ಕಾರ್ಯಕ್ರಮವನ್ನು ಕೂಡ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಹಾಗೂ ವಿವೇಕಾನಂದ ನಾಯಕತ್ವ ಅಭಿವೃದ್ಧಿ ಸಂಸ್ಥೆಗಳು ಆಯೋಜಿಸಲಿವೆ. id='are-slot-1' class='oiad oi-axt oiadv'> id='top-searched-articles'>ಜನ
ಲೋಕಪಾಲ ಮಸೂದೆ ಜಾರಿಗೆ ಉಪವಾಸ ಸತ್ಯಾಗ್ರಹ ಕೈಗೊಂಡ ಬಳಿಕ ಇದೇ ಮೊದಲ ಬಾರಿಗೆ ಅವರು ಮೈಸೂರಿನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿರುವುದಾಗಿ ಸಂಘಟಕರು ತಿಳಿಸಿದ್ದಾರೆ. ಮೈಸೂರಿನ ಕಾರ್ಯಕ್ರಮ ಮುಗಿಸಿಕೊಂಡು ಅವರು ಅಂದು ಸಂಜೆ ಎಚ್.ಡಿ.ಕೋಟೆಗೆ ತೆರಳಿ ಅಲ್ಲಿ ಸಂಜೆ 5 ರಿಂದ 7ರವರೆಗೆ ಮಾತನಾಡಲಿದ್ದಾರೆ. ಬಳಿಕ ವಿವೇಕಾನಂದ ಗಿರಿಜನ ಶಿಕ್ಷಣ ಸಂಸ್ಥೆಗೆ ಭೇಟಿ ನೀಡುವ ಅವರು ನಂತರ ಹೊಸಹಳ್ಳಿಯಲ್ಲಿರುವ ಗಿರಿಜನರ ಹಾಡಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಾರನೆಯ ದಿನ ಎಚ್.ಡಿ.ಕೋಟೆಯಿಂದ ನೇರವಾಗಿ ಬೆಂಗಳೂರಿಗೆ ತೆರಳಲಿದ್ದಾರೆ.











Click it and Unblock the Notifications