ಸವಣೂರು ದೊಡ್ಡಹುಣಸೆ ಮರಕ್ಕೆ ಜಗ್ಗೇಶ್ ಪ್ರದಕ್ಷಿಣೆ

Jaggesh felicitated by Channabasava Mahaswamy
ಸವಣೂರ, ಏ. 26 : ನಗರದ ದೊಡ್ಡಹುಣಸೆ ಕಲ್ಮಠದೊಂದಿಗೆ ಅತ್ಯಂತ ನಿಕಟವಾದ ಸಂಪರ್ಕವನ್ನು ಹೊಂದಿರುವ ನವರಸ ನಾಯಕ ಹಾಗೂ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಜಗ್ಗೇಶ್ ಹಾಗೂ ಚಿತ್ರನಿರ್ಮಾಪಕ ಶ್ರೀನಿವಾಸ್ ಸೋಮವಾರ ಸಂಜೆ ಸವಣೂರಿಗೆ ಭೆಟ್ಟಿ ನೀಡಿದ್ದರು.

ಪವಿತ್ರವಾದ ದೊಡ್ಡಹುಣಸೆ ವೃಕ್ಷ ಸಂಕುಲವನ್ನು ವೀಕ್ಷಿಸಿ, ಪ್ರದಕ್ಷಿಣೆ ಕೈಗೊಂಡು ನಮನ ಸಲ್ಲಿಸಿದ ಜಗ್ಗೇಶ್, ಶ್ರೀಮಠದ ವತಿಯಿಂದ ಶ್ರೀಗಳಾದ ಚನ್ನಬಸವ ಮಹಾಸ್ವಾಮಿಗಳು ಮಾಡಿದ ಸನ್ಮಾನವನ್ನು ಸ್ವೀಕರಿಸಿದರು. ಶ್ರೀಮಠದ ಆವರಣದಲ್ಲಿ ನೆರೆದಿದ್ದ ನೂರಾರು ಮಕ್ಕಳು, ಶಿಕ್ಷಕ ವೃಂದದೊಂದಿಗೆ ಕೆಲವು ಕಾಲ ಕಳೆದ ಜಗ್ಗೇಶ್, ಮುತ್ತಿಕೊಂಡಿದ್ದ ಮಕ್ಕಳಿಗೆ ತಮ್ಮ ಹಸ್ಥಾಕ್ಷರಗಳನ್ನು ನೀಡಿದರು.

ಜಗ್ಗೇಶ್ ಅವರಿಗೆ ಸವಣೂರ ಬಸ್ ಡೀಪೋದ ಅವ್ಯವಸ್ಥೆಯನ್ನು ವಿವರಿಸಿದ ಸವಣೂರಿನ ಪ್ರಮುಖರು, ಅದರ ಅಭಿವೃದ್ದಿಯನ್ನು ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು. ಅತ್ಯಂತ ಶಿಥಿಲವಾದ ಕಟ್ಟಡದಲ್ಲಿ ಸವಣೂರ ಡೀಪೋ ಕಾರ್ಯನಿರ್ವಹಿಸುತ್ತಿದೆ. ವಿಷ ಜಂತುಗಳ ಆವಾಸ ಸ್ಥಾನವಾಗಿದೆ. ಯಾವದೇ ಹಂತದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿರುವ ಡೀಪೋಕ್ಕೆ ಪುನಶ್ಚೇತನ ನೀಡಬೇಕು. ಸೂಕ್ತ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಕೋರಲಾಯಿತು.

ಆದಿ ಬಣಜಿಗ ಸಮಾಜದ ಅಧ್ಯಕ್ಷ ಗಂಗಾಧರ ಬಾಣದ, ಮಹೇಶ ಸಾಲಿಮಠ, ಪುರಸಭೆಯ ಸದಸ್ಯ ಯಲ್ಲಪ್ಪಗೌಡ ಪಾಟೀಲ, ಯೋಗೇಶ ಜಂಬಗಿ, ಎಚ್.ಎಮ್ ಮುದಿಗೌಡ್ರ, ಬಿ.ಎಮ್ ಪಾಟೀಲ ಸೇರಿದಂತೆ ನಗರದ ಹಲವಾರು ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+