ಪುಟ್ಟಪರ್ತಿ ಇನ್ನು ಮತ್ತೊಂದು ಶಿರಡಿಯಾಗಿ ಚಿರಸಾಯಿ
ಬೆಂಗಳೂರು,
ಏ. 25: ಪುಟ್ಟಪರ್ತಿ ಎಂಬ ಪುಟ್ಟ ಊರು ಸಾಯಿಬಾಬಾ ಎಂಬ ಪವಾಡ ಪುರುಷನಿಂದಾಗಿ ಆತನ ಅನುಪಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಮತ್ತೊಂದು ಶಿರಡಿಯಾಗಲಿದೆ. ಗಮನಿಸಿ, ಶಿರಡಿ ಸಾಯಿಬಾಬಾ ಇಹಲೋಕ ತ್ಯಜಿಸಿದ ಬಳಿಕ ಅವರ ಆಶ್ರಮಕ್ಕೂ ಉತ್ತರಾಧಿಕಾರಿ ಇರಲಿಲ್ಲ. ಅದು ಸ್ವಾಮೀಜಿ ಇಲ್ಲದ ಆಶ್ರಮವಾಗಿ ಇಂದಿಗೂ ನಡೆದುಕೊಂಡು ಬರುತ್ತಿದೆ. id="toptextpromo">ಎಲ್ಲ
ಸನ್ಯಾಸಿಗಳು ಮಾಡುವಂತೆ ಸತ್ಯ ಸಾಯಿಬಾಬಾ ಕೂಡ ತಮ್ಮ ಉತ್ತರಾಧಿಕಾರಿಯನ್ನು ನೇಮಕ ಮಾಡಿಲ್ಲ. ಶಿಷ್ಯನನ್ನು ತಯಾರು ಮಾಡಿ ಈತನೇ ಪುಟ್ಟಪರ್ತಿಯ ಪೀಠಾಧಿಪತಿಯಾಗಿ ಪ್ರತಿಷ್ಠಾಪಿತನಾಗುತ್ತಾನೆ ಎಂದು ಬಾಬಾ ಹೇಳಿ ಹೋಗಿಲ್ಲ. ಹಾಗಂತ ಸಾಯಿಬಾಬಾಗೆ ಉತ್ತರಾಧಿಕಾರಿ ಇಲ್ಲವೆಂಬ ಮಾತ್ರಕ್ಕೆ ಪುಟ್ಟಪರ್ತಿ ತನ್ನ ಮಹತ್ವವನ್ನು ಕಳೆದುಕೊಳ್ಳದು. id='are-slot-1' class='oiad oi-axt oiadv'> id='top-searched-articles'>ಪುಟ್ಟಪರ್ತಿ
ಕೂಡ ಇನ್ನು ಶಿರಡಿ ಮಾದರಿಯಾದಲ್ಲಿ ಕಂಗೊಳಿಸಲಿದೆ. ಅಲ್ಲಿ ಗುರುವಿನ ಬದಲು ಆತನ ಹೆಸರಿನಲ್ಲಿ ಸೇವಾ ಕಾರ್ಯಗಳು ನಡೆಯುತ್ತವೆ. ಈ ಹಿಂದೆ ಬಾಬಾ ದರ್ಶನ ಸಾಧ್ಯವಾಗದಿದ್ದರೂ ಪುಟ್ಟಪರ್ತಿಗೆ ಭೇಟಿ ನೀಡಿದ ಭಕ್ತಾದಿಗಳು ಪುನೀತ ಭಾವ ಅನುಭವಿಸುತ್ತಿದ್ದರು. ಬಾಬಾ ಕ್ಷೇತ್ರವೆಂಬ ಭಕ್ತಿ-ಭಾವ ಭಕ್ತರಲ್ಲಿ ಇನ್ನು ಮುಂದೆಯೂ ಚಿರಸಾಯಿಯಾಗಿ ಇರಲಿದೆ. ಹಾಗಾಗಿ ಪುಟ್ಟಪರ್ತಿ ಆಸ್ತಿಕರ ಶ್ರದ್ಧಾಕೇಂದ್ರವಾಗಿ ಮುಂದುವರಿಯುವುದರಲ್ಲಿ ಅನುಮಾನವಿಲ್ಲ.











Click it and Unblock the Notifications